ಕ್ರೀಡೆ

IND Vs AUS: ಆಸ್ಟ್ರೇಲಿಯಾ ತಂಡ ನಿರಾಳ : ಟಿ 20 ಸರಣಿಯಲ್ಲಿ ಭಾಗವಹಿಸಲಿದ್ದಾರೆ ಸ್ಟಾರ್ ಆಟಗಾರ

ದೇಶ(ನವದೆಹಲಿ)ನ.21:- ನವೆಂಬರ್ 27 ರಿಂದ ಭಾರತ ವಿರುದ್ಧದ ಸರಣಿ ಪ್ರಾರಂಭವಾಗುವ ಮೊದಲು ಆಸ್ಟ್ರೇಲಿಯಾ ತಂಡ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.
ಏಕದಿನ ಸರಣಿಯ ನಂತರ ಆಸ್ಟ್ರೇಲಿಯಾದ ಸ್ಟಾರ್ ಫಾಸ್ಟ್ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ 20-20 ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಸ್ಟಾರ್ಕ್ ಇರುವಿಕೆಯಿಂದಾಗಿ ಆಸ್ಟ್ರೇಲಿಯಾ ಭಾರತಕ್ಕೆ ಭಾರೀ ಹೊಡೆತ ನೀಡಬಹುದು ಎನ್ನಲಾಗುತ್ತಿದೆ.
ಆಸ್ಟ್ರೇಲಿಯಾದ ಸ್ಟಾರ್ ಫಾಸ್ಟ್ ಬೌಲರ್ ಸ್ಟಾರ್ಕ್ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ದೂರ ಉಳಿದಿದ್ದರು. ಆದ್ದರಿಂದ ಅವರು 20 -20 ಪಂದ್ಯಗಳಿಂದ ದೂರವಿರುವ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್ ಗ್ರಾತ್ ಈ ಸರಣಿಯಲ್ಲಿ ಸ್ಟಾರ್ಕ್ ಎಸ್ ಫ್ಯಾಕ್ಟರ್ ಸಾಬೀತುಪಡಿಸುತ್ತಾರೆಂದು ಸ್ಪಷ್ಟಪಡಿಸಿದರು.
“ಪ್ಯಾಟ್ ಕಮ್ಮಿನ್ಸ್ ವಿಶ್ವದ ನಂಬರ್ ವನ್ ಬೌಲರ್” ಎಂದು ಮೆಕ್ಗ್ರಾ ಹೇಳಿದ್ದು, ಅವರು ಪಂದ್ಯದಲ್ಲಿ ತಮ್ಮ 100% ನೀಡುತ್ತಾರೆ. ಮಿಚೆಲ್ ಆಗಮನದಿಂದ ತಂಡದ ಸಮತೋಲನ ಪರಿಪೂರ್ಣವಾಗುತ್ತದೆ. ಒಂದೇ ಪಂದ್ಯದಲ್ಲಿ ಸ್ಟಾರ್ಕ್ ನಿಮಗೆ ನಾಲ್ಕರಿಂದ ಐದು ವಿಕೆಟ್ ನೀಡಬಹುದು ಎಂದಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಟ್ವೆಂಟಿ-ಟ್ವೆಂಟಿ ಕಡೆಗೆ ತನ್ನ ಗಮನವಿದೆ ಎಂದು ಸ್ಟಾರ್ಕ್ ಸ್ಪಷ್ಟಪಡಿಸಿದ್ದಾರೆ. ಸ್ಟಾರ್ಕ್ ಇದುವರೆಗೆ ಆಸ್ಟ್ರೇಲಿಯಾ ಪರ 57 ಟೆಸ್ಟ್, 94 ಏಕದಿನ ಮತ್ತು 34 ಟ್ವೆಂಟಿ-ಇಪ್ಪತ್ತು ಪಂದ್ಯಗಳನ್ನು ಆಡಿದ್ದಾರೆ.
8 ತಿಂಗಳ ಅಂತರದ ನಂತರ ಆಸ್ಟ್ರೇಲಿಯಾ ಮತ್ತು ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ಧವಾಗಿವೆ. ಮಾರ್ಚ್ 13 ರಂದು ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿವೆ. ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಿದ ನಂತರ ಭಾರತೀಯ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಿತ್ತು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: