ದೇಶಪ್ರಮುಖ ಸುದ್ದಿ

ಮಸ್ಸೂರಿಯಲ್ಲಿನ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ತರಬೇತಿ ನಿರತ 33 ಐಎಎಸ್ ಅಧಿಕಾರಿಗಳಿಗೆ ಕೋವಿಡ್ ಪಾಸಿಟಿವ್

ಡೆಹ್ರಾಡೂನ್,(ಉತ್ತರಾಖಂಡ್),ನ.21- ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿನ ತರಬೇತಿ ನಿರತ 33 ಐಎಎಸ್ ಅಧಿಕಾರಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಐಎಎಸ್ ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರು ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿನ ತರಬೇತಿ ನಿರತ 33 ಐಎಎಸ್ ಅಧಿಕಾರಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಲಾಲ್ ಬಹದ್ದೂರು ಶಾಸ್ತ್ರಿ ರಾಷ್ಟ್ರೀಯ ಆಡಳಿತ ಆಕಾಡೆಮಿ, ಒಟ್ಟಾರೇ 428 ಅಧಿಕಾರಿಗಳು ಕ್ಯಾಂಪಸ್ ನಲ್ಲಿ ತರಬೇತಿ ಪಡೆಯುತ್ತಿದ್ದು, ಈ ಪೈಕಿ 33 ಅಧಿಕಾರಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಸರ್ಕಾರದ ಸೂಚನೆ ಅನುಸಾರ ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದೆ.

ಸೂಕ್ತ ರಕ್ಷಣೆಯೊಂದಿಗೆ ಹಾಸ್ಟೆಲ್ ಸಿಬ್ಬಂದಿ ತರಬೇತಿ ನಿರತ ಅಧಿಕಾರಿಗಳಿಗೆ ಆಹಾರ ಮತ್ತಿತರ ಅವಶ್ಯತೆಗಳನ್ನು ಪೂರೈಸುತ್ತಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದೆ.

ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಡೆಹ್ರಾಡೂನ್ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ನವೆಂಬರ್ 30ರವರೆಗೆ ಎಲ್ಲಾ ತರಗತಿಗಳೂ ಆನ್ ಲೈನ್ ನಲ್ಲಿ ನಡೆಯಲಿವೆ. ಅವಶ್ಯಕತೆಯೇತರ ಇಲಾಖೆಗಳನ್ನು ಮುಚ್ಚಲಾಗಿದ್ದು, ಇಡೀ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಅಕಾಡೆಮಿ ನಿರ್ದೇಶಕ ಸಂಜಯ್ ಚೋಪ್ರಾ ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: