ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಹೊಸ ಲುಕ್ ನಲ್ಲಿ ಆ್ಯಕ್ಷನ್ ಪ್ರಿನ್: ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಕೂದಲು ದಾನ ಮಾಡಿದ ಧ್ರುವ ಸರ್ಜಾ

ಬೆಂಗಳೂರು,ನ.21-ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ `ಪೊಗರು’ ಗಾಗಿ ಆ್ಯಕ್ಷನ್ ಪ್ರಿನ್ ನಟ ಧ್ರುವ ಸರ್ಜಾ ಉದ್ದ ಕೂದಲು ಬಿಟ್ಟಿದ್ದರು. ಇದೀಗ ಕೂದಲಿಗೆ ಕತ್ತರಿ ಹಾಕಿದ್ದು, ಹೊಸ ಲುಕ್‌ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಪೊಗರು ಸಿನಿಮಾ ಶೂಟಿಂಗ್‌ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಹೇರ್ ಕಟ್ ಮಾಡಿಸಿದ್ದಾರೆ. ಹೊಸ ಹೇರ್ ಸ್ಟೈಲ್ ಮಾಡಿಸಿಕೊಳ್ಳುವಾಗಲೂ ಧ್ರುವ ಸಮಾಜಮುಖಿಯಾಗಿ ಅಲೋಚಿಸಿದ್ದಾರೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ತಮ್ಮ ಕೂದಲನ್ನು ದಾನ ಮಾಡಿದ್ದಾರೆ.

ಹೇರ್ ಕಟ್ ಮಾಡಿಸುವ ಮುಂಚೆ ಕೂದಲು ದಾನದ ಬಗ್ಗೆ ತಿಳಿಸಿ ತಾವು ಹೇರ್‌ ಕಟ್ ಮಾಡಿಸುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಪೊಗರು ಸಿನಿಮಾ ಶೂಟಿಂಗ್‌ ಮುಗಿಯಿತು. ಇನ್ನೇನು ಹೇರ್‌ ಕಟ್‌ ಮಾಡಿಸಬೇಕು ಎಂದಾಗ ಸ್ನೇಹಿತರೆಲ್ಲ ಸೇರಿಕೊಂಡು ಒಂಚೂರು ಎಜುಕೇಟ್‌ ಮಾಡಿದರು. ಹತ್ತು ಇಂಚಿಗಿಂತಲೂ ಹೆಚ್ಚು ಉದ್ದವಾಗಿರುವ ಕೂದಲು ಡೊನೇಟ್‌ ಮಾಡುವ ವಿಷಯ ತಿಳಿಸಿದರು. ನಾನೊಬ್ಬನೇ ಅಲ್ಲ, ಸಾಕಷ್ಟು ಜನ ಡೊನೇಟ್‌ ಮಾಡಿದ್ದಾರೆ. ಕ್ಯಾನ್ಸರ್‌ ಬಂದಿರುವ 15 ವರ್ಷಕ್ಕಿಂತ ಕೆಳಗೆ ಇರುವ ಕೆಲವು ಮಕ್ಕಳಿಗೆ ಕಿಮೋ ಥೆರಪಿ ಮಾಡಿದಾಗ ಸ್ವಲ್ಪ ಹೇರ್‌ ಲಾಸ್‌ ಆಗಿರುತ್ತದೆ. ಅಂಥವರಿಗಾಗಿ ವಿಗ್‌ ಮಾಡಿಸಿದಾಗ ನಾವು ನೈತಿಕವಾಗಿ ಬೆಂಬಲ ನೀಡುತ್ತೇವೆ. ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೂ ನಾವು ಇದನ್ನು ಮಾಡುತ್ತಿದ್ದೇನೆ. ಹೇರ್‌ ಕಟ್‌ ಮಾಡಿಸುವ ಎಲ್ಲರೂ ಈ ರೀತಿ ಮಾಡಿಸಿದರೆ ಎಷ್ಟೋ ಜನರಿಗೆ ಉಪಯೋಗ ಆಗುತ್ತದೆ ಎಂದಿದ್ದಾರೆ ಧ್ರುವ ಸರ್ಜಾ.

ಪೊಗರು ಸಿನಿಮಾದ ಪಾತ್ರಕ್ಕಾಗಿ ಧ್ರುವ ಬಾಡಿ ಬಿಲ್ಡ್ ಮಾಡಿದಲ್ಲದೆ, ಕಳೆದ ಎರಡು ವರ್ಷಗಳಿಂದಲೂ ಈ ಹೇರ್‌ ಸ್ಟೈಲ್‌ ನಿಭಾಯಿಸಿಕೊಂಡು ಬಂದಿದ್ದರು. ಅಂತೂ ಈಗ ಆ ಗೆಟಪ್‌ಗೆ ವಿದಾಯ ಹೇಳಿದ್ದಾರೆ.

ಪೊಗರು ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ನಂದಕಿಶೋರ್‌ ನಿರ್ದೇಶನ ಮಾಡಿದ್ದಾರೆ. ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಚಂದನ್‌ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಖರಾಬು..’ ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಆ ಮೂಲಕ ಸಿನಿಮಾ ಮೇಲೆ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ. ಪೊಗರು ಸಿನಿಮಾ ಕ್ರಿಸ್ಮಸ್ ಅಥವಾ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರುವ ಸಾಧ್ಯತೆ ಇದೆ. (ಎಂ.ಎನ್)

Leave a Reply

comments

Related Articles

error: