ದೇಶಪ್ರಮುಖ ಸುದ್ದಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ಪ್ಲೇಕಾರ್ಡ್ ಎಸೆದ ವ್ಯಕ್ತಿ: ಆತಂಕ ಸೃಷ್ಟಿ; ವ್ಯಕ್ತಿ ಪೊಲೀಸರ ವಶಕ್ಕೆ

ಚೆನ್ನೈ,ನ.21-ಚೆನ್ನೈಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಐಎಡಿಎಂಕೆ ಮತ್ತು ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.

ಇಂದು ನಗರಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು ವಿಮಾನ ನಿಲ್ದಾಣದ ಬಳಿ ತಮ್ಮನ್ನು ಸ್ವಾಗತಿಸಲು ಬಂದ ಪ್ರೇಕ್ಷಕರಿಗೆ ಶುಭಾಶಯ ಕೋರಲು ವಾಹನದಿಂದ ಕೆಳಗೆ ಇಳಿದಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಅಮಿತ್ ಶಾ ಮೇಲೆ . ಪ್ಲೇಕಾರ್ಡ್ ಎಸೆದಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

60 ವರ್ಷದ ವ್ಯಕ್ತಿಯೊಬ್ಬರು ಕೇಂದ್ರ ಸಚಿವರ ಮೇಲೆ ಫಲಕ ಎಸೆದಿದ್ದು, ಅದೃಷ್ಟವಶಾತ್ ಅದು ಅಮಿತ್ ಶಾ ಅವರಿಗೆ ತಗುಲಿಲ್ಲ. ಪ್ಲೇಕಾರ್ಡ್ ಎಸೆದ ದುರೈರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಮಿತ್ ಶಾ ಅವರು ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಮತ್ತು ಬಿಜೆಪಿಯ ಕಾರ್ಯಕರ್ತರ ಬಳಿ ತೆರಳಿದರು. ಈ ವೇಳೆ ದುರೈರಾಜ್ ಅವರು ತಮ್ಮ ಕೈಯಲ್ಲಿದ್ದ ಫಲಕವನ್ನು ಎಸೆದಿದ್ದಾರೆ. ಆದರೆ ಅದನ್ನು ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸರು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರು ಪೊಲೀಸರ ಬಳಿ ತೆರಳಿ ವಿಚಾರಿಸಿದ್ದು, ದುರೈರಾಜ್ ಒಬ್ಬ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: