ಮೈಸೂರು

“ರಾಜ್ ಕುಮಾರ ಪಂಚಪದಿ” ಪುಸ್ತಕ ಲೋಕರ್ಪಾಣೆ ಕಾರ್ಯಕ್ರಮ

ಮೈಸೂರು,ನ.21:- ನಗರದ ಸರಸ್ವತಿಪುರಂನ ಫಿನಿಕ್ಸ್ ಪುಸ್ತಕ ಮಳಿಗೆಯಲ್ಲಿ ಇಂದು ಮಂಜುನಾಥ ಹಾಲುವಾಗಿಲು ಅವರ ರಾಜಕುಮಾರ “ಪಂಚಪಧಿ” ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಪಾಕ ಅಧ್ಯಕ್ಷರಾದ ಎಂ. ರಾಮೇಗೌಡ ಅವರು ರಾಜಕುಮಾರ್ “ಪಂಚಪದಿ” ಬಿಡುಗಡೆ ಮಾಡಿ ಮಾತನಾಡಿ ಪ್ರತಿಯೊಬ್ಬ ಕನ್ನಡಿಗನ ಮನದಲ್ಲೂ ಚಿರಸ್ಥಾಯಿಯಾಗಿ ಉಳಿದಿರುವ ಏಕೈಕ ಕನ್ನಡದ ಸಾರ್ವಭೌಮ ಎಂದ ಅವರು ರಾಜುಕುಮಾರ್ ಅವರು ಅಭಿನಯಿಸಿದ ಪ್ರತಿಯೊಂದು ಚಿತ್ರಗಳಿಂದಲೂ ಮನರಂಜನೆ ಅಷ್ಟೇ ಅಲ್ಲದೆ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ನೀಡದ ಕಲಾಪುರುಷ ಎಂದು ತಿಳಿಸಿದರು.
ನಟನಾ ಪ್ರತಿಭೆಯ ಬಗ್ಗೆ ಮಾತನಾಡಿ ರಾಜ್ ಕುಮಾರ್ ಅವರಿಗೆ ಸರಿಸಾಟಿಯಾಗಿ ನಿಲ್ಲುತ್ತಿದ್ದವರೆಂದರೆ ಅದು ರಾಜುಕುಮಾರ್ ಅವರು ಮಾತ್ರ ಎಂದು ತಿಳಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಅಣ್ಣಾ ಎಂಬ ಬಿರುದನ್ನು ಹೇಗೆ ಜನರ ಮನಸಿನಲ್ಲಿ ಪಡೆದ್ದಿದರೋ ಹಾಗೆ 21ನೇ ಶತಮಾನದಲ್ಲಿ ಡಾ.ರಾಜ್ ಕುಮಾರ ಚಿತ್ರರಂಗದಲ್ಲಿ ಅಣ್ಣಾ ಎಂಬ ಬಿರುದಿಗೆ ಪಾತ್ರರಾದರು ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅನ್ನಪೂರ್ಣ ಪಿಜಿಯೋಥೆರೆಫಿ ಕ್ಲಿನಿಕ್ ನ ಡಾ.ಎಸ್.ಪಿ.ಆರ್ದಶ್ ಮಾತನಾಡಿ ಡಾ. ರಾಜ್ ಕುಮಾರ್ ಅವರು ಭಾರತೀಯ ಚಿತ್ರರಂಗದ ಅತ್ಯದ್ಭತ ಕಲಾವಿದರು. ಕೇವಲ ಕಲಾವಿದರಷ್ಟೇ ಅಲ್ಲ, ಸೋದರತೆ, ಸಹಬಾಳ್ವೆಯೊಂದಿಗೆ ಎಲ್ಲರಲ್ಲಿ ಒಂದಾಗಿ ಬದುಕಿದವರು. ಡಾ.ರಾಜ್ ಕುಮಾರ ಎಂದು ತಿಳಿಸಿದರು. ಡಾ.ರಾಜ್ ಕುಮಾರ್ “ಪಂಚಪದಿ” ಪುಸ್ತಕ ಕರ್ನಾಟಕದಲ್ಲಿ ಏಕ ಕಾಲದಲ್ಲಿ ನೂರು ಕಡೆ ಬಿಡುಗಡೆಯಾಗಿದೆ. ಇದು ಅತ್ಯಂತ ಸಂತೋಷದ ವಿಷಯವೆಂದು ತಿಳಿಸಿದರು.
ಸಮಾರಂಭದಲ್ಲಿ ಬನ್ನೂರು ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಬನ್ನೂರು ಪುಟ್ಟಸ್ವಾಮಿ, ಜಯನಗರದ ಭದ್ರಿನಾರಾಯಾಣ್, ರವಿಚಂದ್ರ, ಮುರುಳಿ, ಕೃಷ್ಣಕುಮಾರ್, ಕೊಪ್ಪಲು ನಾಗರಾಜು, ಕೃಷ್ಣ, ಸುರೇಶ್ಗೌಡ, ಕಾಂತರಾಜ್, ಮಹಿನ್, ಶ್ರೀನಿವಾಸ್, ಚೈತ್ರ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: