ಕರ್ನಾಟಕಪ್ರಮುಖ ಸುದ್ದಿ

ಚಾಮರಾಜನಗರದಲ್ಲಿ 17ಕೋವಿಡ್ ಪ್ರಕರಣ ಪತ್ತೆ

ರಾಜ್ಯ( ಚಾಮರಾಜನಗರ)ನ.21:- ಜಿಲ್ಲೆಯಲ್ಲಿಂದು 17 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಆರು ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 88ಕ್ಕೆ ಏರಿದೆ.

ನಿನ್ನೆಗೆ ಹೋಲಿಸಿದರೆ ದೃಢಪಟ್ಟ ಪ್ರಕರಣಗಳ ಸಂಖ್ಯೆ ಮೂರು ಕಡಿಮೆಯಾಗಿದೆ. ಸಾವಿನ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 6,245 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. 6,030 ಮಂದಿ ಗುಣಮುಖರಾಗಿದ್ದಾರೆ. 108 ಮಂದಿ ಕೋವಿಡ್‌ನಿಂದ ಹಾಗೂ 19 ಮಂದಿ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 88 ಮಂದಿಯ ಪೈಕಿ 35 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ 14 ಜನರಿದ್ದಾರೆ.

ಶನಿವಾರ 1,218 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 1,203 ಮಂದಿಯ ವರದಿ ನೆಗೆಟಿವ್‌ ಬಂದಿವೆ. 15 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಎರಡು ಪ್ರಕರಣ ಮೈಸೂರಿನಲ್ಲಿ ದೃಢ‍ಪಟ್ಟಿವೆ.

Leave a Reply

comments

Related Articles

error: