ಮೈಸೂರು

ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ವಂಚಿತರಿಂದ ಬೃಹತ್ ಪ್ರತಿಭಟನೆ, ದೂರು

ಮೈಸೂರು,ನ.22:- ನಮಗೆ ನ್ಯಾಯ ಕೊಡಿಸಿ ಅಥವಾ ನಾವು ಕಟ್ಟಿರುವ ಹಣಕ್ಕೆ ನಮಗೆ ನಿವೇಶನ ಕೊಡಿಸಿಕೊಡಿ ಎಂದು ಆಗ್ರಹಿಸಿ ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘದ ನಿವೇಶನ ವಂಚಿತ ಹಿತರಕ್ಷಣಾ ಹೋರಾಟ ಸಮಿತಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿ ಠಾಣೆಗೂ ದೂರು ಸಲ್ಲಿಸಿತು.

ನಗರದ ದೇವೇಗೌಡ ವೃತ್ತದ ಸಮೀಪ ಇರುವ ಸಹಕಾರ ಸಂಘದ ಕಚೇರಿಯಲ್ಲಿ ಜಮಾವಣೆಗೊಂಡ ನೂರಾರು ಮಂದಿ ನಿವೇಶನ ವಂಚಿತರು ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. 1200 ಮಂದಿಯಿಂದ 80 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಕಟ್ಟಿಸಿಕೊಂಡು ಈಗ ಸಂಘವೇ ಸೂಪರ್ ಸೀಡ್ ಆಗಿದೆ ಎನ್ನುತ್ತಿದ್ದಾರೆ. ಹೀಗಾಗಿ ಸರ್ಕಾರ, ಸಹಕಾರ ಸಚಿವರು ಹಾಗೂ ಮುಖ್ಯಮಂತ್ರಿಗಳು ನಿರ್ದೇಶಕರ ಆಸ್ತಿಯನ್ನು ಮುಟ್ಟುಗೋಲು ಹಾಕಿ ನಮಗೆ ನ್ಯಾಯಕೊಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

11-12ನೇ ಸಾಲಿನಲ್ಲಿ ಸೊಸೈಟಿಯನ್ನು ಸ್ಥಾಪಿಸಿದ್ದು, ಇದುವರೆವಿಗೂ ಒಬ್ಬರಿಗೂ ನಿವೇಶನ ಕೊಟ್ಟಿಲ್ಲ. ನಮಗೂ ಕಾದು ಕಾದೂ ಸಾಕಾಗಿ ಎರಡು ವರ್ಷಗಳಿಂದ ಸಹಕಾರ ಇಲಾಖೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದೇವೆ. ಸಚಿವರಿಗೂ ಇದನ್ನು ಗಮನಕ್ಕೆ ತಂದಿದ್ದೇವೆ. ಯಾರಿಂದಲೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: