ಮೈಸೂರು

ಜಾಗದ ವಿಚಾರ : ಮಾರಣಾಂತಿಕ ಹಲ್ಲೆ ; ಪಾಲಿಕೆ ರೆವೆನ್ಯೂ ಇನ್ಸಪೆಕ್ಟರ್ ಮೇಲೆ ಕೇಳಿ ಬಂತು ಸುಪಾರಿ ಕೊಟ್ಟ ಆರೋಪ

ಮೈಸೂರು,ನ.22:- ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ಕೇಸ್ ಕೈತಪ್ಪಿದ ಹಿನ್ನೆಲೆಯಲ್ಲಿ
ಎದುರಾಳಿ ದೂರುದಾರರ ಮೇಲೆ ಹಲ್ಲೆ ಮಾಡಲು ಪಾಲಿಕೆ ಅಧಿಕಾರಿಯೋರ್ವರು ಸುಪಾರಿ ಕೊಟ್ಟಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಮೈಸೂರು ಮಹಾನಗರ ಪಾಲಿಕೆಯ ರೆವಿನ್ಯೂ ಇನ್ಸ್ಪೆಕ್ಟರ್‌ ಮೇಲೆ ಸುಪಾರಿ ಕೊಟ್ಟ ಆರೋಪ ಕೇಳಿ ಬಂದಿದ್ದು, ಸುಪಾರಿ ಪಡೆದ ವ್ಯಕ್ತಿಗಳಿಂದ ದೂರುದಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಅಧಿಕಾರಿ ಆಪ್ತರು ಗುಂಪಾಗಿ ಬಂದು ಹಲ್ಲೆ ಮಾಡಿದ್ದಾರೆ.
ಮೈಸೂರಿನ ಪಾಲಿಕೆಯಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಆಗಿರುವ ಕುಪ್ಪರಾಜು ಆಪ್ತರು ದೂರುದಾರ ಕುಟುಂಬದ ನಾಲ್ವರ ಮೇಲೆ ಚಾಕು ಹಾಗೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ಮೈಸೂರಿನ ಬಿಬಿ ಕೇರಿಯ ಪುಲಿಕೇಶಿ ರಸ್ತೆಯಲ್ಲಿ ನವೆಂಬರ್ 19 ರಂ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಿವಕುಮಾರ್ ಎಂಬ ಪೌರಕಾರ್ಮಿಕ ಕುಟುಂಬದ ಮೇಲೆ ಹಲ್ಲೆ ನಡೆದಿದ್ದು, ಶಿವಕುಮಾರ್ ಕುಟುಂಬದ ನಾಲ್ವರು ವ್ಯಕ್ತಿಗಳು ಹಲ್ಲೆಯಿಂದ ಗಾಯಗೊಂಡಿದ್ದಾರೆ. ಕುಪ್ಪರಾಜು ತಮ್ಮ ಹರಿಪ್ರಸಾದ್,ವಿಶ್ವನಾಥ್ ಎಂಬವರಿಂದ ಚಾಕು ಇರಿತದ ಆರೋಪ ಕೇಳಿ ಬಂದಿದೆ. ಚಾಕು ಇರಿತಕ್ಕೊಳಗಾದ ಶಿವಕುಮಾರ್‌ ಕುಟುಂಬಸ್ಥರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಕುಮಾರ್ ವಾಸವಿರುವ ಮನೆ ಹಾಗಾ ಖಾಲಿ ಜಾಗದ ಮೇಲೆ ಪ್ರಕರಣ ಇದ್ದು, ನ್ಯಾಯಾಲಯದಲ್ಲಿ ಶಿವಕುಮಾರ್ ಪರವಾಗಿ ತೀರ್ಪು ಬಂದಿತ್ತು. ಈ ಹಿನ್ನೆಲೆಯಲ್ಲಿ ಕುಪ್ಪರಾಜು ಹಲ್ಲೆ ಮಾಡಿಸಿರುವ ಆರೋಪ ಕೇಳಿ ಬಂದಿದ್ದು, ಪಾಲಿಕೆ ರೆವಿನ್ಯೂ ಇನ್ಸ್ ‌ಪೆಕ್ಟರ್ ‌ಕುಪ್ಪರಾಜು ಮೇಲೆ ದೂರು ನೀಡಿದರೂ ಪ್ರಯೋಜನವಿಲ್ಲವೆಂಬ ಆರೋಪ ಕೇಳಿ ಬಂದಿದೆ.
ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನಲ್ಲೂ ಕುಪ್ಪರಾಜು ಹೆಸರು ಪ್ರಸ್ತಾಪಿಸದಕ್ಕೆ ಶಿವಕುಮಾರ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಕ್ಕಾಗಿ ಶಿವಕುಮಾರ್ ಕುಟುಂಬಸ್ಥರು ಅಂಗಲಾಚುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: