ಮೈಸೂರು

ಆಯುರ್ವೇದಕ್ಕೆ ಎಲ್ಲ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ : ಶಾಸಕ ಎಲ್.ನಾಗೇಂದ್ರ

ಮೈಸೂರು,ನ.22:- ಕೆ ಎಂ ಪ್ರವೀಣ್ ಕುಮಾರ್ (ಕೆ ಎಂ ಪಿ ಕೆ )ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ಜಾತಿಯ ಆಯುರ್ವೇದ ಗಿಡಗಳನ್ನು ವಿತರಿಸಿ ಆಯುರ್ವೇದದಲ್ಲಿ ಆಗುವ ಅನುಕೂಲ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಆಯುರ್ವೇದ ಸಸಿಗಳಾದ ಅಮೃತಬಳ್ಳಿ ,ಕೃಷ್ಣ ತುಳಸಿ ,ರಾಮ ತುಳಸಿ ,ಬೆಟ್ಟದ ನೆಲ್ಲಿಕಾಯಿ, ದೊಡ್ಡಿಪತ್ರೆ ,ಅಗಸೆ ಗಿಡ ,ನೇರಳೆ ಗಿಡ ,ಬೇವಿನ ಗಿಡ, ತುಳಸಿ, ಅರಿಶಿನ ಗಿಡ, ಹಾಗೂ ಇನ್ನಿತರ ಔಷಧ ಗಿಡಮೂಲಿಕೆಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಲ್ ನಾಗೇಂದ್ರ ಆಯುರ್ವೇದ ಒಂದು ಪುರಾತನ ವೈದ್ಯಕೀಯ ಶಾಸ್ತ್ರ, ಆಯುರ್ವೇದದಲ್ಲಿಯ
ಸೂತ್ರಗಳನ್ನು ಪಾಲಿಸುವುದರಿಂದ ಕೇವಲ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹೊಸ, ಹೊಸ ರೋಗಗಳಿಗೆ ಚಿಕಿತ್ಸೆ ಮೂಲಕ ಗುಣಪಡಿಸುವ ಸಾಮರ್ಥ್ಯವಿದೆ ಎಂದು ಶಾಸಕ ನಾಗೇಂದ್ರ ಹೇಳಿದರು.
ವಿದ್ಯಾರ್ಥಿಗಳು ಆಯುರ್ವೇದದಲ್ಲಿ ಉತ್ತಮ ಮಟ್ಟದ ಶಿಕ್ಷಣ ಪಡೆದುಕೊಂಡು ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸತತ ಪರಿಶ್ರಮದ ಸಂಕಲ್ಪ ಮಾಡಬೇಕು. ಆಯುರ್ವೇದ ಕೇವಲ ಪೂರಕ ವೈದ್ಯಕೀಯ ಶಾಸ್ತ್ರವಾಗಿದೆ ಅದು ಪರಿಪೂರ್ಣ ವೈದ್ಯಕೀಯ ಶಾಸ್ತ್ರವಾಗಿದ್ದು, ಎಲ್ಲ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಆಯುರ್ವೇದವನ್ನು ಪ್ರಚಲಿತಗೊಳಿಸಬೇಕು’ ಎಂದು ಮನವಿ ಮಾಡಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ ‘ಆಯುರ್ವೇದವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು, ಇದು ಜಗತ್ತಿನ ಒಂದು ಅತ್ಯುತ್ತಮ ವೈದ್ಯಕೀಯ ಶಾಸ್ತ್ರವಾಗಿದೆ. ಇದಕ್ಕೆ ಅಂತರರಾಷ್ಟ್ರೀಯ ಮನ್ನಣೆಯೂ ದೊರಕಿದೆ. ಉತ್ತಮ ಫಲಿತಾಂಶಗಳು ಸಹ ಬಂದಿವೆ. ಆರೋಗ್ಯಕ್ಕೆ ತುಂಬಾ ಸಹಕಾರಿ
ಎಂದರು.
ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಮಾತನಾಡಿ ಆಯುರ್ವೇದದಲ್ಲಿಯ ವಿಶೇಷ ಮುಂಜಾಗ್ರತೆ ಕ್ರಮಗಳನ್ನು ಹಾಗೂ ಚಿಕಿತ್ಸಾ ವಿಧಾನಗಳನ್ನು ಜಾಗತಿಕ ಮಟ್ಟದಲ್ಲಿ ಹಾಗೂ ಜನ ಸಾಮಾನ್ಯರಿಗೆ ದಿನನಿತ್ಯ ಉಪಯೋಗಕ್ಕೆ ಬರುವ ಗಿಡಮೂಲಿಕೆಗಳ ಬಗ್ಗೆ ಗಿಡಮೂಲಿಕೆಯ ಬಗ್ಗೆ ಹೆಚ್ಚಿನ ಹೆಚ್ಚಿನ ಪ್ರಚಾರ ಮಾಡುವುದು ಅತ್ಯವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಮನೆಮನೆಗೆ ಆಯುರ್ವೇದವನ್ನು ತಲುಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭ ಮೂರ್ತಿ, ನಗರ ಪಾಲಿಕಾ ಸದಸ್ಯರಾದ ಎಸ್ ಬಿಎಂ ಮಂಜು , ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್ ,ಮಧು ಎನ್ ,ಶಿವಪ್ರಕಾಶ್ ,ಸುಚೀಂದ್ರ, ಚಕ್ರಪಾಣಿ ,ಶ್ರೀಕಾಂತ್ ಕಶ್ಯಪ್ ,ರಾಜೇಶ್ ,ಪೈಲ್ವಾನ್ ಸುನೀಲ್ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: