ಪ್ರಮುಖ ಸುದ್ದಿಮನರಂಜನೆಮೈಸೂರು

ಫುಟ್ ಪಾತ್ ನಲ್ಲಿ ಸಾಮಾನ್ಯರಂತೆ ಟೀ ಕುಡಿದು ಸರಳತೆ ಮೆರೆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ !

ಮೈಸೂರು,ನ.22:- ಸ್ಯಾಂಡಲ್ ವುಡ್ ಸ್ಟಾರ್, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರು ಭಾನುವಾರ ಫುಟ್‍ ಪಾತ್‍ ನಲ್ಲಿ ಸಾಮಾನ್ಯರಂತೆ ಟೀ ಕುಡಿದು ಸರಳತೆ ಮೆರೆದಿದ್ದಾರೆ. ನಟ ಶಿವರಾಜ್ ಕುಮಾರ್ ಅವರ ನಡೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮೈಸೂರಿನ ಒಂಟಿಕೊಪ್ಪಲಿನ ಮಾತೃಮಂಡಳಿ ವೃತ್ತದಲ್ಲಿರುವ ಡಾ.ರಾಜ್ ಟೀ ಸ್ಟಾಲ್ ಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅವರು ಸಾಮಾನ್ಯರಂತೆ ಟೀ ಕುಡಿದರು. ಶಿವರಾಜ್ ಕುಮಾರ್ ಅವರು ಸ್ಟಾರ್ ಗಿರಿ ಬಿಟ್ಟು ಸಾಮಾನ್ಯರಂತೆ ಫುಟ್‍ಬಾತ್‍ನಲ್ಲಿ ಟೀ ಕುಡಿಯುತ್ತಿರುವುದನ್ನು ನೋಡಿದ ಅಭಿಮಾನಿಗಳು, ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವರಾಜ್ ಕುಮಾರ್ ಅವರನ್ನು ಕಂಡ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಯಾವುದಕ್ಕೂ ಅವಸರಿಸದ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಪ್ರೀತಿಗೆ ಸ್ಪಂದಿಸಿದರು. ಉಭಯ ಕುಶಲೋಪರಿ ವಿಚಾರಿಸಿದರು.
ಬಹುನಿರೀಕ್ಷಿತ ಭಜರಂಗಿ-2 ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಳಿಕ ಆರ್ ಡಿಎಕ್ಸ್, ಬೈರತಿ ರಣಕಲ್ಲು ಎಂಬ ಪ್ರಾಜೆಕ್ಟ್ ಗಳಿಗೂ ಕಾಲ್ ಶೀಟ್ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: