ಮೈಸೂರು

ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ವೀಕ್ಷಿಸಿದ ಶಾಸಕ ಎಲ್.ನಾಗೇಂದ್ರ

ಮೈಸೂರು,ನ.22:- ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಶಾಸಕ ಎಲ್.ನಾಗೇಂದ್ರ ಪರಿಶೀಲನೆ ನಡೆಸಿದರು.
ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಚುರುಕುಗೊಂಡ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪರಿಶೀಲಿಸಿದರು. ಇರ್ವಿನ್ ರಸ್ತೆಗೆ ಮರು ಡಾಂಬರೀಕರಣ ಕಾರ್ಯ ನಡೆಸಲಾಗಿದ್ದು, ಇನ್ನು ಎರಡು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣವಾಗುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರದಿಂದ 37 ಕೋಟಿ ಹಣ ಬಿಡುಗಡೆ ಆಗಿದೆ. ಬಹುತೇಕ ಬಿಲ್ಡಿಂಗಳನ್ನು ತೆರವು ಮಾಡಲಾಗಿದೆ. ನ್ಯಾಯಾಲಯದ ವ್ಯಾಜ್ಯದಲ್ಲಿರುವ ಒಂದು ಮನೆ ಹಾಗೂ ಮಸೀದಿ ಮಾತ್ರ ತೆರವು ಮಾಡಬೇಕಿದೆ. ಮಸೀದಿ ತೆರವು ವಿಚಾರ ಈಗಾಗಲೇ ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರ ಜೊತೆ ಕೂಡ ಮಾತುಕತೆ ಆಗಿದೆ. ಶೀಘ್ರದಲ್ಲಿ ಅದನ್ನು ತೆರವು ಮಾಡಿ ಮತ್ತು ಉತ್ತಮ ವಾಣಿಜ್ಯ ರಸ್ತೆಯನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಶಾಸಕರು ಇದೇ ವೇಳೆ ತಿಳಿಸಿದರು.
ಮೂಡಾ ಹಗರಣ ಎಸಿಬಿ ತನಿಖೆಗೆ ನೀಡಲಿದ್ದೇವೆ ಎಂದಿರುವ ಮೂಡಾ ಅಧ್ಯಕ್ಷ ಹೆಚ್ ವಿ ರಾಜೀವ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಎಸಿಬಿ ಅಲ್ಲ ಸಿಬಿಐ ಬಂದರೂ ಮೂಡಾ ಹಗರಣಗಳನ್ನು ಒಮ್ಮೆಲೇ ತಡೆಯಲು ಸಾಧ್ಯವಿಲ್ಲ. ಮೂಡಾ ವ್ಯಾಪ್ತಿಯಲ್ಲಿ ಸಾಕಷ್ಟು ಹಗರಣಗಳಿವೆ . ಹಂತಹಂತವಾಗಿ ಬಗೆಹರಿಸುವ ಕ್ರಮ ಕೈಗೊಳ್ಳಬೇಕು. ಒಮ್ಮೆಲೆ ಎಲ್ಲವನ್ನೂ ಸರಿಪಡಿಸಬಹುದು ಎಂಬುದು ತಪ್ಪು ಕಲ್ಪನೆ .ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕ್ರಮ ವಹಿಸಿದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: