ಮೈಸೂರು

ಆಧಾರ ರಹಿತ ಹೇಳಿಕೆಗೆ ವಿರೋಧ : ಡಾ.ಚಿದಾನಂದ ಮೂರ್ತಿ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯನವರು ಬೇರೆ ಬೇರೆ ಎನ್ನುವ ಹೇಳಿಕೆಯನ್ನು ನೀಡುವ ಮೂಲಕ ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿಯವರು ಇತಿಹಾಸಕ್ಕೆ ಅಪಪ್ರಚಾರವೆಸಗಿ ನೇಕಾರ ಸಮುದಾಯವನ್ನು ಅವಮಾನಿಸುತ್ತಿದ್ದಾರೆಂದು ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆಯ ಡಾ.ವಿಜಯ್ ರಾಜು ಆರೋಪಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ ಡಾ.ಚಿಮೂ ಅವರು 2015ರ ಸರ್ಕಾರಿ ಮಟ್ಟದ ದೇವರ ದಾಸಿಮಯ್ಯ  ಜಯಂತಿ ಕಾರ್ಯಕ್ರಮದಲ್ಲಿಯೇ ಈ ಬಗ್ಗೆ ಅಪಸ್ವರ ತೆಗೆದಿದ್ದರು ಅದೇ ಹೇಳಿಕೆಯನ್ನು  ಪದೇ ಪದೇ ಆಧಾರ ರಹಿತವಾಗಿ ನೀಡುವ ಮೂಲಕ ಇತಿಹಾಸವನ್ನು ಗೊಂದಲದಲ್ಲಿರಿಸಿ ನೇಕಾರರ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ.  ಡಾ.ಚಿಮೂ ಅವರು ಸ್ವಾತಂತ್ರ್ಯವನ್ನು ಕೇವಲ ಸಂಶೋಧನೆಗಷ್ಟೇ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿ. ಅವರು ಪೂರ್ವಾಗ್ರಹ ಪೀಡಿತರಾಗಿ ಇತಿಹಾಸದ ವಿರುದ್ಧ ವಾಗ್ಧಾಳಿ ನಡೆಸುತ್ತಿರುವುದನ್ನು ಸಮುದಾಯವು ಖಂಡಿಸಿದ್ದು ಚಿಮೂ ವಿರುದ್ಧ ಇದೇ.ಏ.12ರಂದು ಸಂಜೆ 6.30ಕ್ಕೆ ಮೈಸೂರಿನ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನೇಕಾರರು ಶಾಂತಿ ಪ್ರಿಯರು, ಅವರನ್ನು ವಿನಾಕಾರಣ ಕೆರಳಿಸುತ್ತಿದ್ದು ಸ್ಪಷ್ಟ ದಾಖಲೆಗಳಿದ್ದರೆ ಮಾತ್ರ ಮಾತನಾಡಬೇಕೆಂದು ಡಾ.ಚಿಮೂ ವಿರುದ್ಧ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ದಿವಾಕರ್ ದೂರಿದರಲ್ಲದೇ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದ ಹಾದಿ ತಪ್ಪಿಸುತ್ತಿದ್ದು ಹೇಳಿಕೆಗಳಿಗೆ ಸ್ಪಷ್ಟ ಆಧಾರ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಡಾ.ಚಿಮೂ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆರ್.ನರಸಿಂಹ ಮೂರ್ತಿ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಹೇಮಾ ಗಂಗಪ್ಪ,ಮಂಜುಳ ಹಾಗೂ ಇತರರು  ಪಾಲ್ಗೊಂಡಿದ್ದರು. (ಕೆ.ಎಂ.ಆರ್-ಎಸ್.ಎಚ್)

 

Leave a Reply

comments

Related Articles

error: