ಮೈಸೂರು

ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಓರ್ವ ಪ್ರವಾಸಿಗನ ಚಿನ್ನಾಭರಣ ಲೂಟಿ

ಮೈಸೂರು,ನ.23:- ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರೋರ್ವರ ಚಿನ್ನಾಭರಣ, ಹಣ, ಲ್ಯಾಪ್ ಟಾಪ್ ಅನ್ನು ಕಳುವು ಮಾಡಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.
ಮೈಸೂರಿನ ಹೆಚ್.ಡಿ.ಕೋಟೆಯ ಬದನಗುಪ್ಪೆ ಗ್ರಾಮದಲ್ಲಿರುವ ರೆಡ್ ಹಾರ್ಥ್ ರೆಸಾರ್ಟ್ನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಸುಧೀರ್ ಯಜವತ್ ಹಣ, ಚಿನ್ನ ಕಳೆದುಕೊಂಡವರು. 60ಸಾವಿರ ನಗದು, ಚಿನ್ನದ ಕೈ ಚೈನ್, ಲ್ಯಾಪ್ ಟಾಪ್ ಅನ್ನು ಕಳುವು ಮಾಡಲಾಗಿದೆ. ಸುಧೀರ್ ಬೆಂಗಳೂರಿನಿಂದ ಬಂದು ರೆಡ್ ಹಾರ್ಥ್ ರೆಸಾರ್ಟ್ನಲ್ಲಿ ತಂಗಿದ್ದರು.
ಸುಧೀರ್ ಶನಿವಾರ ರಾತ್ರಿ ಊಟಕ್ಕೆ ತೆರಳಿದ್ದು ಈ ವೇಳೆ ಚಿನ್ನ ಹಣ ಕಳ್ಳತನವಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೆಸಾರ್ಟ್ನಲ್ಲಿದವರನ್ನು ಠಾಣೆಗೆ ಕರೆಸಿ ಪಿಎಸ್ ಐ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಕುರಿತು ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: