ಮೈಸೂರು

ರಾಷ್ಟ್ರಮಟ್ಟದ ನೃತ್ಯೋತ್ಸವ – ಏ.14 ರಿಂದ 16ರವರೆಗೆ

ಕಲ್ಪಶ್ರೀ ಪರ್ಫಾರ್ಮಿಂಗ್ ಆರ್ಟ್ಸ್ ಕೇಂದ್ರದ 28ನೇ ವಾರ್ಷಿಕೋತ್ಸವದಂಗವಾಗಿ ರಾಷ್ಟ್ರಮಟ್ಟದ ನೃತ್ಯೋತ್ಸವ2017 ಅನ್ನು ಆಯೋಜಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಗುರು.ಎಂ.ಸಿ.ಸುಜೇಂದ್ರಬಾಬು ಹೇಳಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಏ.14 ರಿಂದ 16ರವರೆಗೆ ಜಗನ್ಮೋಹನ ಅರಮನೆಯಲ್ಲಿ ನೃತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.  ಏ.14ರಂದು ಸಂಜೆ 4ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಶಶಿಕಲಾ ವೆಂಕಟೇಶ್, ಮೈಸೂರಿನ ಸೌಮ್ಯ ನೃತ್ಯಶಾಲೆಯ ಸಂಸ್ಥಾಪಕಿ ಸೌಮ್ಯರಾಣಿ ಪಾಲ್ಗೊಳ್ಳುವರು. ಏ,15ರ ಸಂಜೆ 4ರ ಕಾರ್ಯಕ್ರಮದಲ್ಲಿ  ಚೆನ್ಹೈನ ನೃತ್ಯಾಲಯಂ ಕಲ್ಚರಲ್ ಅಕಾಡೆಮಿಯ ಸ್ವರ್ಣಲತಾ ಸತೀಶ್, ಸತೀಶ್ ಹಾಗೂ ಹೈದ್ರಾಬಾದ್‍ನ ನೃತ್ಯ ರವಳಿ ಕೂಚುಪುಡಿ ಅಕಾಡೆಮಿಯ ಸುರೇಂದ್ರ ನಾಥ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಏ.16ರ ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಹೆಚ್.ಚನ್ನಪ್ಪ, ಕಲಾವಿದೆ ಪಂಕಜ ರಾಮಕೃಷ್ಣಯ್ಯ, ಲಾಸ್ಯರಂಜನ ಶಾಲೆಯ ನಿರ್ದೇಶಕಿ ಜ್ಯೋತಿ ಎನ್.ಹೆಗ್ಡೆ, ಹಾಗೂ ಚೆನ್ಹೈನ ನೃತ್ಯ ಕತಾರ ಡ್ಯಾನ್ಸ್ ಅಕಾಡೆಮಿಯ ಚೈತ್ರ ಮುರಳೀಧರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಮೂರು ದಿನಗಳ ಕಾಲ ನಡೆಯುವ ನೃತ್ಯೋತ್ಸವದಲ್ಲಿ ತಮಿಳುನಾಡು, ಬಿಹಾರ್, ಕೇರಳ ರಾಜ್ಯಗಳ ರಾಷ್ಟ್ರಮಟ್ಟದ ಖ್ಯಾತ ಕಲಾವಿದರು ಭರತನಾಟ್ಯ, ಕೂಚುಪುಡಿ, ಕಥಕ್, ಒಡಿಸ್ಸಿ ಸೇರಿದಂತೆ ಹಲವಾರು ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ಸಮಾರೋಪದಂದು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು ಎಂದು ತಿಳಿಸಿದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: