ಮೈಸೂರು

ಸೋಲು-ಗೆಲುವಿನ ಬೆಟ್ಟಿಂಗ್ ಆರಂಭ

ಮುಂದಿನ ಚುನಾವಣಾ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ನಂಜನಗೂಡು ಉಪಚುನಾವಣಾ ಮತದಾನ ಮುಗಿದ ಬಳಿಕ ಸೋಲು-ಗೆಲುವಿನ ಲೆಕ್ಕಾಚಾರದ ಜೊತೆ ಭರ್ಜರಿ ಬೆಟ್ಟಿಂಗ್ ಆರಂಭವಾಗಿದೆ.

ಅಭ್ಯರ್ಥಿಗಳ ಭವಿಷ್ಯ ಹೊರಬೀಳಲು ಇನ್ನು ಒಂದೇ ದಿನ ಬಾಕಿ ಉಳಿದಿದ್ದು, ಯಾರು ಗೆಲ್ಲಬಹುದೆನ್ನುವ ಚರ್ಚೆಗಳು ಜೋರಾಗಿವೆ. ಅದರ ಜೊತೆ ಗ್ರಾಮೀಣ ಪ್ರದೇಶಗಳಲ್ಲಿ 10 ಸಾವಿರದಿಂದ 1ಲಕ್ಷದವರೆಗೂ ಬೆಟ್ಟಿಂಗ್ ನಡೆಯುತ್ತಿದೆ. ಇನ್ನು ಕೆಲವು ರೈತರು ಒಡವೆ, ಪ್ರಾಣಿಗಳನ್ನು ಪಣವಾಗಿಟ್ಟು ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಬೂತ್ ಮಟ್ಟದಲ್ಲಿಯೇ ಬೆಟ್ಟಿಂಗ್ ಜೋರಾಗಿ ನಡೆದಿದೆ.

ಒಟ್ಟಿನಲ್ಲಿ ಯಾರು, ಯಾರು ಪಣಗಳಲ್ಲಿ ಏನೇನು ಕಳೆದುಕೊಳ್ಳಲಿದ್ದಾರೆ ಎನ್ನುವುದು ಏ.13ರಂದು ತಿಳಿದುಬರಲಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: