ಮೈಸೂರು

ರೆಸಾರ್ಟ್ ನಲ್ಲಿದ್ದ ಪ್ರವಾಸಿಗನ ಲೂಟಿ ಪ್ರಕರಣ : 24 ಗಂಟೆಯೊಳಗೆ ಕಳುವು ಆರೋಪಿಯ ಬಂಧನ

ಮೈಸೂರು, ನ.24:- ವಾರಾಂತ್ಯ ಕಳೆಯಲು ಬೆಂಗಳೂರಿನಿಂದ ಬಂದು ಕಬಿನಿ ಹಿನ್ನೀರಿನ ಸಮೀಪದ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರೋರ್ವರ ಚಿನ್ನಾಭರಣ, ಹಣ, ಲ್ಯಾಪ್ ಟಾಪ್ ಕಳುವಾಗಿರುವ ಘಟನೆ ಎಚ್‌.ಡಿ. ಕೋಟೆ ತಾಲೂಕಿನಲ್ಲಿ ನಡೆದಿತ್ತು. ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿರುವ ಪೊಲೀಸರು ಓರ್ವವನ್ನು ಬಂಧಿಸುವ ಜತೆಗೆ 5 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಎಚ್.ಡಿ.ಕೋಟೆ ತಾಲೂಕಿನ ಬದನಕುಪ್ಪೆ ಗ್ರಾಮದ ಜಯರಾಜು (35) ಎಂದು ಗುರುತಿಸಲಾಗಿದೆ. ನ.21ರಂದು ಹೆಚ್.ಡಿ.ಕೋಟೆ ತಾಲೂಕಿನ ಬದನಕುಪ್ಪೆ ಗ್ರಾಮದ ಬಳಿಯ ರ ರೆಸಾರ್ಟ್ ನ ಕೊಠಡಿಯೊಂದರಲ್ಲಿ ಕಳ್ಳತನ ನಡೆದ ಬಗ್ಗೆ ತಾಲೂಕಿನ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ಸುಧೀರ್‌ ಯಜವತ್ ಎಂಬವರು ಶನಿವಾರ ಬಂದು ಬದನಗುಪ್ಪೆ ಗ್ರಾಮದಲ್ಲಿರುವ ರೆಸಾರ್ಟ್‌ ನಲ್ಲಿ ವಾಸ್ತವ್ಯ ಹೂಡಿದ್ದರು. ಅದೇ ದಿನ ರಾತ್ರಿ ಊಟಕ್ಕೆಂದು ರೆಸಾರ್ಟ್‌ ನ ಡೈನಿಂಗ್‌ ಹಾಲ್‌ ಗೆ ಹೋಗಿದ್ದಾಗ ಇವರ ರೂಮಿನಿಂದ 60 ಸಾವಿರ ನಗದು, ಚಿನ್ನದ ಕೈ ಚೈನ್, ಲ್ಯಾಪ್ ಟಾಪ್ ಕಳುವಾಗಿತ್ತು.

ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ಆರೋಪಿ ಜಯರಾಜ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿ ಈತ ತಪ್ಪೊಪ್ಪಿಕೊಂಡಿದ್ದು, ಕಳ್ಳತನ ಮಾಡಿದ್ದ 5 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಜಯರಾಜು ಈ ಹಿಂದೆ ಇದೇ ರೆಸಾರ್ಟ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು, ಈ ವೇಳೆ ಅಲ್ಲಿನ ವ್ಯವಸ್ಥೆಗಳ ಬಗ್ಗೆ ತಿಳಿದುಕೊಂಡು ಈ ಕೃತ್ಯವೆಸಗಿಗಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. (ಕೆ.ಎಸ್,ಎಸ್.ಎಚ್)

ಇದನ್ನೂ ಓದಿ
ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಓರ್ವ ಪ್ರವಾಸಿಗನ ಚಿನ್ನಾಭರಣ ಲೂಟಿ

Leave a Reply

comments

Related Articles

error: