ಮೈಸೂರು

ಉರುಳಿದ ಮರ : ಇಬ್ಬರ ದುರ್ಮರಣ

ಮರ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಣಸೂರಿನಲ್ಲಿ ನಡೆದಿದೆ.

ಮೃತರನ್ನು ಚಿಕ್ಕ ಹುಣಸೂರು ಗ್ರಾಮದ ನಿವಾಸಿ ಮಹೇಶ್ (40), ರಾಮೇನಹಳ್ಳಿ ನಿವಾಸಿ ಪ್ರಕಾಶ್ (35) ಎಂದು ಗುರುತಿಸಲಾಗಿದೆ. ಇವರಿಬ್ಬರು ಬಟ್ಟೆ ವ್ಯಾಪಾರಿಗಳಾಗಿದ್ದು, ಆಜಾದ್ ನಗರದಲ್ಲಿ ಟೀ ಕುಡಿಯಲು ಅಂಗಡಿಯೊಂದರ ಮುಂದೆ ನಿಂತಿದ್ದಾಗ ಭಾರೀ ಗಾತ್ರದ ಮರವೊಂದು ಇವರ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: