ಮೈಸೂರು

ಅಕ್ರಮ ಪಂಪ್ ಸೆಟ್ ಗಳ ಸಕ್ರಮೀಕರಣ

ಮೈಸೂರು. ನ.24:- ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಪಿರಿಯಾಪಟ್ಟಣ ತಾಲೂಕಿನಲ್ಲಿ ಚಾಲನೆ ನೀಡಿದೆ.
ಪಿರಿಯಾ ಪಟ್ಟಣ ಉಪವಿಭಾಗ ವ್ಯಾಪ್ತಿಗೆ ಬರುವ ಮುತ್ತೂರು, ಮಾಲಂಗಿ, ಚೌತಿ, ಕಂಪಲಾಪುರ, ಕೀರನಹಳ್ಳಿ, ಪಂಚವಳ್ಳಿ, ದೊಡ್ಡಬೇಲಾಳು, ಹುಣಸವಾಡಿ, ಪುನಾಡಹಳಿ, ನವಿಲೂರು, ಬೈಲಕೊಪ್ಪ, ಚನ್ಕಲ್, ಕೊಪ್ಪ, ಟಿಬೆಟ್ ಕ್ಯಾಂಪ್, ಆವರ್ತಿ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೃಷಿ ನೀರಾವರಿ ಪಂಪ್ಸೆಟ್ಗಳನ್ನು ಉಪಯೋಗಿಸುತ್ತಿರುವವರು ನವೆಂಬರ್ 30ರೊಳಗೆ ಅಗತ್ಯ ದಾಖಲೆಗಳೊಂದಿಗೆ ಹಣ ಪಾವತಿಸಿ ಅಕ್ರಮ ಪಂಪ್ ಸೆಟ್ಗಳನ್ನು ಸಕ್ರಮೀಕರಣಗೊಳಿಸಿ ಮೂಲಭೂತ ಸೌಕರ್ಯ ಕಲ್ಪಿಸಲು ನಿಗಮದ ವತಿಯಿಂದ ಕ್ರಮವನ್ನು ಕೈಗೊಳ್ಳಲಾಗಿದೆ.
ತಪ್ಪಿದ್ದಲ್ಲಿ, ಅಕ್ರಮ ಪಂಪ್ ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಪಂಪ್ ಸೆಟ್ ಸ್ಥಾವರದ ಗ್ರಾಹಕರ ಜ್ಯೇಷ್ಠತಾ ಪಟ್ಟಿಗಳನ್ನು ರದ್ದುಗೊಳಿಸಲಾಗುವುದು ಎಂದು ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.08223-274228ಗೆ ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: