
ದೇಶಪ್ರಮುಖ ಸುದ್ದಿ
ಗುರುವಾರ ಮಾಜಿ ಸಿಎಂ ತರುಣ್ ಗೊಗೊಯ್ ಅಂತ್ಯಕ್ರಿಯೆ : ಅಸ್ಸಾಂನಲ್ಲಿ ಮೂರು ದಿನ ಶೋಕಾಚರಣೆ
ದೇಶ(ಅಸ್ಸಾಂ)ನ.24:- ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದು, ಗುರುವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಿಪುನ್ ಬೋರಾ ಮಾಹಿತಿ ನೀಡಿದ್ದಾರೆ. “ಗೊಗೊಯ್ ಅವರ ಕೊನೆಯ ಆಸೆಯಂತೆ, ಅವರ ಪಾರ್ಥೀವ ಶರೀರವನ್ನು ಕೊನೆಯ ವಿಧಿಗಳ ಮೊದಲು ದೇವಾಲಯ, ಮಸೀದಿ ಮತ್ತು ಚರ್ಚ್ ಗೆ ಕೊಂಡೊಯ್ಯಲಾಗುವುದು” ಎಂದು ಬೋರಾ ಹೇಳಿದ್ದಾರೆ. ಅಸ್ಸಾಂನಲ್ಲಿ ಗೊಗೊಯ್ ನಿಧನ ಕುರಿತು ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
‘ಅವರ ಪತ್ನಿ ಡಾಲಿ ಮತ್ತು ಮಗ ಗೌರವ್ ಅವರು ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಬಳಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂದು ವಿನಂತಿಸಿದ್ದಾರೆ. ಕುಟುಂಬದ ಇಚ್ಛೆಯಂತೆ ಮಂಗಳವಾರ ಸಂಜೆ ಪಾರ್ಥೀವ ಶರೀರವನ್ನು ಗುವಾಹಟಿಯ ಶ್ರೀಮಂತ ಶಂಕರರ್ದೇವ್ ಕಲಾಕ್ಷೇತ್ರಕ್ಕೆ ಕೊಂಡೊಯ್ಯಲಾಗುವುದು. ನವೆಂಬರ್ 25 ರಂದು ಇಡೀ ದಿನ ಅಲ್ಲಿಯೇ ಇಡಲಾಗುವುದು. ಕಲಾ ಕ್ಷೇತ್ರದಿಂದ ಅವರ ಅಂತಿಮ ಯಾತ್ರೆಯು ನವೆಂಬರ್ 26 ರಂದು ಪ್ರಾರಂಭವಾಗಲಿದೆ. ಅಂತಿಮ ಸಂಸ್ಕಾರವನ್ನು ಸ್ಥಳೀಯ ನಗರ ಟೈಟಾಬೋರ್ ಬದಲಿಗೆ ಗುವಾಹಟಿಯಲ್ಲಿ ನಡೆಸಲಾಗುವುದು ಎಂದು ಹೇಳಿದ್ದಾರೆ.
“ಗೊಗೊಯ್ ಅವರ ಕೊನೆಯ ಇಚ್ಛೆಯಂತೆ ಅವರ ಪಾರ್ಥೀವ ಶರೀರವನ್ನು ಕೊನೆಯ ವಿಧಿಗಳ ಮೊದಲು ದೇವಾಲಯ, ಮಸೀದಿ ಮತ್ತು ಚರ್ಚ್ಗೆ ಕೊಂಡೊಯ್ಯಲಾಗುವುದು” ಎಂದು ಬೋರಾ ಹೇಳಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಅನೇಕ ಕೇಂದ್ರ ನಾಯಕರು ಅಸ್ಸಾಂಗೆ ಬಂದು ಗೊಗೊಯ್ ಅವರಿಗೆ ಗೌರವ ಸಲ್ಲಿಸುವ ನಿರೀಕ್ಷೆ ಇದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)