ಲೈಫ್ & ಸ್ಟೈಲ್

ನೆಲ್ಲಿಕಾಯಿಯಲ್ಲಿದೆ ಕಪ್ಪು ಕೂದಲ ರಹಸ್ಯ!

ಎಲ್ಲರಿಗೂ ತನ್ನ ಕೂದಲು ಕಪ್ಪಗಿರಬೇಕು ಎಂಬ ಬೃಹತ್ ಆಸೆ ಇರುತ್ತದೆ. ಅದರಲ್ಲೂ ಇತ್ತೀಚೆಗೆ ಪುರುಷರ  ತಲೆಯ ಕೂದಲು, ಗಡ್ಡ, ಮೀಸೆ  ಬೇಗ ಬಿಳಿ ಬಣ್ಣವನ್ನು ತಾಳಲಾರಂಭಿಸಿದ್ದು, ಪದೇ ಪದೇ ಕನ್ನಡಿಯ ಮುಂದೆ ನಿಲ್ಲುವಂತೆ ಮಾಡಿದೆ.  ಕೂದಲು ಬೆಳ್ಳಗಾಗುವುದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ.

 ಪುದೀನ : ಪುದೀನ ಎಲೆಗಳನ್ನು ನುಣ್ಣಗೆ ಅರೆದು ಗುಲಾಬಿ ರಸದಲ್ಲಿ ಮಿಶ್ರಣ ಮಾಡಿ ಹಚ್ಚಿದರೆ ಕೂದಲು ಕಪ್ಪಾಗಿಯೇ ಇರಲಿದೆ.

 ನೆಲ್ಲಿಕಾಯಿ : ನೆಲ್ಲಿಕಾಯಿಯನ್ನು ಕತ್ತರಿಸಿ ಹೋಳುಗಳನ್ನಾಗಿ ಮಾಡಿಕೊಂಡು ಅದನ್ನು ತೆಂಗಿನೆಣ್ಣೆಯಲ್ಲಿ ಹಾಕಿ ಕುದಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗಲಿದೆ.

ಟೊಮ್ಯಾಟೋ :  ಮೊಸರಿನ ಜೊತೆ ಟೊಮ್ಯಾಟೋವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಲಿಂಬುರಸ ಹಾಕಿ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.

ಮೊಸರು : ತೆಂಗಿನೆಣ್ಣೆಯಲ್ಲಿ ಮೊಸರನ್ನು ಮಿಶ್ರಣ ಮಾಡಿಕೊಂಡು ಹಾಕಿಕೊಳ್ಳುವುದರಿಂದಲೂ ಕೂದಲು ಕಪ್ಪಗಿರುತ್ತದೆ.

ಕಪ್ಪು ಎಳ್ಳು :  ಕಪ್ಪು ಎಳ್ಳನ್ನು ಕೆಲಕಾಲ ನೀರಿನಲ್ಲೆ ನೆನೆಯಿಸಿ ಬಳಿಕ ಇದನ್ನು ನುಣ್ಣಗೆ ಅರೆದು ಹಾಕಿಕೊಳ್ಳುವುದರಿಂದಲೂ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ಬ್ಲಾಕ್ ಚಹಪುಡಿ : ಇದನ್ನು  ನೀರಿನಲ್ಲಿ ಹಾಕಿ ಕುದಿಸಿ. ಬಳಿಕ ಕುದಿಸಿದ ನೀರನ್ನು ಆರಿದ ಮೇಲೆ ಕೂದಲುಗಳಿಗೆ ಹಚ್ಚಿದಲ್ಲಿ ಕೂದಲು ಬೆಳ್ಳಗಾಗಲಾರದು.

ಶುಂಠಿರಸ  : ಶುಂಠಿರಸದ ಜೊತೆ ಸ್ವಲ್ಪ ಜೇನು ಬೆರೆಸಿ ಹಚ್ಚುವುದರಿಂದಲೂ ಕೂದಲು ಕಪ್ಪುಬಣ್ಣದಲ್ಲಿಯೇ  ಕಂಗೊಳಿಸುವದು.

ಈರುಳ್ಳಿ ರಸ : ಇದನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗಲಿದೆ. ಇವುಗಳಲ್ಲಿ ಯಾವುದಾದರೂ ಒಂದನ್ನು ವಾರಕ್ಕೆರಡು ಬಾರಿಯಾದರೂ ಪ್ರಯತ್ನಿಸಿದಲ್ಲಿ ಕೂದಲು ಕಪ್ಪಗಿರುವಂತೆ ನೋಡಿಕೊಳ್ಳಬಹುದು. (ಎಸ್.ಎಚ್)

 

Leave a Reply

comments

Related Articles

error: