ಪ್ರಮುಖ ಸುದ್ದಿ

ವಿವಾಹದ ಸಲುವಾಗಿ ನಡೆಯುವ ಧಾರ್ಮಿಕ ಮತಾಂತರ ಕಾನೂನು ಕರಡು ಅಂಗೀಕರಿಸಿದ ಯುಪಿ ಸರ್ಕಾರ

ದೇಶ( ಲಖನೌ)ನ.25:- ಉತ್ತರ ಪ್ರದೇಶ ಸರ್ಕಾರ ವಿವಾಹದ ಸಲುವಾಗಿ ನಡೆಯುವ ಧಾರ್ಮಿಕ ಮತಾಂತರವನ್ನು ತಡೆಯುವ ಕಾನೂನನ್ನು ಬಿಗಿಗೊಳಿಸುವ ಕರಡನ್ನು ಮಂಗಳವಾರ ಅಂಗೀಕರಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಕಾನೂನುಬಾಹಿರ ಧಾರ್ಮಿಕ ಮತಾಂತರಗಳ ವಿರುದ್ಧ ಸುಗ್ರೀವಾಜ್ಞೆ ತರಲು ಉತ್ತರ ಪ್ರದೇಶ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಉತ್ತರ ಪ್ರದೇಶ ಸಚಿವ ಸಿದ್ಧಾರ್ಥ ನಾಥ ಸಿಂಗ್‌ ತಿಳಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: