ದೇಶಪ್ರಮುಖ ಸುದ್ದಿ

ಚಿನ್ನ ಕಳ್ಳ ಸಾಗಣೆ: ಮೂವರ ಬಂಧನ, 72.5 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

ನವದೆಹಲಿ,ನ.25- ಚಿನ್ನ ಕಳ್ಳ ಸಾಗಣೆ ಪ್ರಕರಣದಡಿ ಏರ್‌ ಇಂಡಿಯಾ ಸಿಬ್ಬಂದಿ ಸೇರಿ ಮೂವರನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಅವರಿಂದ 72.5 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಬಂಧಿತರಲ್ಲಿ ಇಬ್ಬರು ಏರ್‌ ಇಂಡಿಯಾ ಎಸ್‌ಎಟಿಎಸ್‌ ಸಿಬ್ಬಂದಿಗಳಾಗಿದ್ದಾರೆ. ಅಬುಧಾಬಿಯಿಂದ ಬಂದ ಪ್ರಯಣಿಕರೊಬ್ಬರನ್ನು ಕಸ್ಟಮ್‌ ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದ್ದರು.

ಈ ವೇಳೆ ಆತ ತಾನು ಅಬುಧಾಬಿಯಿಂದ ಬರುವಾಗ ಬೆಳ್ಳಿ ಬಣ್ಣದ ಪ್ಯಾಕೆಟ್‌ನಲ್ಲಿ 1.48 ಕೆ.ಜಿ ಚಿನ್ನವನ್ನು ತಂದಿದ್ದೆ. ಅದನ್ನು ತಾನು ಬಂದ ವಿಮಾನದ ಶೌಚಾಲಯದಲ್ಲಿ ಅಡಗಿಸಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಏರ್‌ ಇಂಡಿಯಾದ ಎಸ್‌ಎಟಿಎಸ್‌ ಸಿಬ್ಬಂದಿಯೊಬ್ಬ, ಇನ್ನೊಬ್ಬ ಸಿಬ್ಬಂದಿಗೆ ಚಿನ್ನವನ್ನು ನೀಡುತ್ತಿರುವಾಗ ಕಸ್ಟಮ್‌ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ. ಈ ಮೂವರು ಆರೋಪಿಗಳನ್ನು ಚಿನ್ನ ಕಳ್ಳ ಸಾಗಣೆ ಪ್ರಕರಣದಡಿ ಬಂಧಿಸಲಾಗಿದ್ದು, 72.5 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಚಾರಣೆ ವೇಳೆ ಈ ಹಿಂದೆಯೂ 2.17 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳ ಸಾಗಣೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: