ಕರ್ನಾಟಕಪ್ರಮುಖ ಸುದ್ದಿಮೈಸೂರು

ರಾಜ್ಯದ ವಿವಿಧ ಠಾಣೆಗಳ 48 ಪೊಲೀಸ್ ಇನ್ಸಪೆಕ್ಟರ್ ವರ್ಗಾವಣೆ

ಮೈಸೂರು/ಬೆಂಗಳೂರು,ನ.26:- ರಾಜ್ಯದ ವಿವಿಧ ಠಾಣೆಗಳ 48 ಪೊಲೀಸ್ ಇನ್ಸಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರಿನಲ್ಲೂ ಐದು ಮಂದಿ ಇನ್ಸಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಐ ಜಿಪಿ ಕಛೇರಿಯಲ್ಲಿದ್ದ ಅಜರುದ್ದೀನ್ ನರಸಿಂಹರಾಜ ಪೊಲೀಸ್ ಠಾಣೆಗೆ, ಕರ್ನಾಟಕ ಲೋಕಯುಕ್ತಾದಲ್ಲಿದ್ದ ಶಶಿಕುಮಾರ್ ಹೆಚ್ ಡಿ ಕೋಟೆ ವೃತ್ತಕ್ಕೆ, ದೇವರಾಜ ಪೊಲೀಸ್ ಠಾಣೆಯ ಪ್ರಸನ್ನ ಕುಮಾರ್ ಅವರನ್ನು ನರಸಿಂಹರಾಜ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಹಾಗೆಯೇ ನರಸಿಂಹ ರಾಜ ಸಂಚಾರಿ ಠಾಣೆಯಲ್ಲಿದ್ದ ದಿವಾಕರ್ ಅವರನ್ನು ದೇವರಾಜ ಪೊಲೀಸ್ ಠಾಣೆಗೆ, ಐಎಸ್ ಡಿ ಯಿಂದ ತಿಮ್ಮರಾಜು ಅವರನ್ನು ಸರಸ್ವತಿಪುರಂ ಠಾಣೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: