ದೇಶಪ್ರಮುಖ ಸುದ್ದಿ

ತ್ರಿವಳಿ ತಲಾಖ್‍ನಿಂದ ಮುಸ್ಲಿಂ ಮಹಿಳೆಯರ ಸಾಂವಿಧಾನಿಕ ಹಕ್ಕುಗಳಿಗೆ ವಂಚನೆ: ಕೇಂದ್ರ ಸರ್ಕಾರ ಲಿಖಿತ ವಿವರಣೆ

ನವದೆಹಲಿ : ತ್ರಿವಳಿ ತಲಾಖ್‍ನಂತಹ ಪದ್ಧತಿಗಳು ಮುಸ್ಲಿಂ ಮಹಿಳೆಯರ ಘನತೆಗೆ ಕುಂದುಂಟು ಮಾಡಿ ಅವರ ಜೀವನ ಮಟ್ಟವನ್ನು ಕೆಳಹಂತಕ್ಕೆ ಕೊಂಡೊಯ್ಯುತ್ತವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ಗೆ ಲಿಖಿತ ವಿರವಣೆ ನೀಡಿದೆ.

ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ಹೊಸ ಲಿಖಿತ ಸಲ್ಲಿಕೆಯಲ್ಲಿ ಕೇಂದ್ರ ಸರ್ಕಾರ ತನ್ನ ಈ ಹಿಂದಿನ ನಿಲುವಿಗೆ ಬದ್ಧವಾಗಿದೆ. ತ್ರಿವಳಿ ತಲಾಖ್, ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಗಳು ಸಮಾಜದಲ್ಲಿ ಮುಸಲ್ಮಾನ ಮಹಿಳೆಯರ ಗೌರವದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಸಂವಿಧಾನದಲ್ಲಿರುವ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ಈ ಪದ್ಧತಿಗಳ ಆಚರಣೆಯಿಂದಾಗಿ ಮುಸ್ಲಿಂ ಮಹಿಳೆಯರನ್ನು ಸಾಮಾಜಿಕವಾಗಿ ದುರ್ಬಲಗೊಳಿಸಿದಂತೆ ಆಗುತ್ತದೆ. ಮುಸಲ್ಮಾನ ಮಹಿಳೆಯರ ಗೌರವಕ್ಕೆ ಇದರಿಂದ ಧಕ್ಕೆಯುಂಟಾಗುತ್ತದೆ. ಹೀಗಾಗಿ ಮುಸಲ್ಮಾನ ಸಮುದಾಯದಲ್ಲಿರುವ ಈ ಪದ್ಧತಿಗಳನ್ನು ನ್ಯಾಯಾಲಯ ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಮುಸ್ಲಿಂ ಖಾಸಗಿ ಕಾನೂನಿನಲ್ಲಿ ಕಳೆದ 6 ದಶಕಗಳಲ್ಲಿ ಸುಧಾರಣೆ ಆಗಿಲ್ಲ. ಮುಸ್ಲಿಂ ಮಹಿಳೆಯರ ಸಂಖ್ಯೆ ದೇಶದಲ್ಲಿ ಶೇಕಡಾ 8 ರಷ್ಟಿದ್ದು ಆ ಸಮುದಾಯದಲ್ಲಿನ ವಿಚ್ಛೇದನದಿಂದಾಗಿ ಮಹಿಳೆಯರ ಸ್ಥಾನಮಾನದಲ್ಲಿಯೂ ಸುಧಾರಣೆ ಕಂಡಿಲ್ಲ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

(ಎನ್‍.ಬಿ.ಎನ್‍)

Leave a Reply

comments

Related Articles

error: