ಕರ್ನಾಟಕಪ್ರಮುಖ ಸುದ್ದಿಮೈಸೂರು

ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ನಿರ್ಮಾಣ ಪರಿಶೀಲಿಸಿದ ಶ್ರೀರಾಮುಲು : ಶೀಘ್ರದಲ್ಲೇ 16ಕೋಟಿ ಬಿಡುಗಡೆ ಮಾಡಿಸುವ ಭರವಸೆ

ಮೈಸೂರು,ನ.26:- ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ನಿರ್ಮಾಣವನ್ನು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಇಂದು ಪರಿಶೀಲಿಸಿದರು.
ನಗರದ ದೇವರಾಜ ಮೊಹಲ್ಲಾದಲ್ಲಿ ನಿರ್ಮಾಣಗೊಂಡಿರೋ ಅಂಬೇಡ್ಕರ್ ಸಮುದಾಯ ಭವನದ ನಿರ್ಮಾಣ ಕಾರ್ಯ ಕಳೆದೊಂದು ದಶಕದಿಂದ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದ ಸಚಿವ ಶ್ರೀರಾಮುಲು ಅವರು ಕಟ್ಟಡ ಪರಿಶೀಲಿಸಿದರು. ಇದೇ ವೇಳೆ ಕಟ್ಟಡ ಪೂರ್ಣಗೊಳಿಸುವ ವಿಚಾರವಾಗಿ ಕೆಲಹೊತ್ತು ಸಂಸದ ಶ್ರೀನಿವಾಸ್ ಪ್ರಸಾದ್ ಜೊತೆ ಚರ್ಚೆ ನಡೆಸಿದರು. ಸಚಿವರಿಗೆ ಶಾಸಕ ಹರ್ಷವರ್ಧನ್,ನಾಗೇಂದ್ರ,ಮುಡಾ ಅಧ್ಯಕ್ಷ ರಾಜೀವ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.
ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಕಟ್ಟಡ ಪರೀಶಿಲನೆ ನಂತರ ಪ್ರತಿಕ್ರಿಯಿಸಿದ ಸಚಿವರು ನಿಂತಿರುವ ಭವನ ಕಾಮಗಾರಿ ಮುಕ್ತಾಯ ಗೊಳಿಸಲು ಸ್ಥಳಿಯ ಶಾಸಕರು, ಜಿಲ್ಲಾಮಂತ್ರಿ 16 ಕೋಟಿ ಪ್ರಸ್ತಾಪ ಇಟ್ಟಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ 16 ಕೋಟಿ ಹಣ ಬಿಡುಗಡೆ ಮಾಡಿಸುತ್ತೇನೆ. ನಿಂತಿರೋ ಕೆಲಸ ಪೂರ್ಣಗೊಳಿಸಿ ಅದಷ್ಟು ಬೇಗ ಪೂರ್ಣ ಪ್ರಮಾಣದಲ್ಲಿ ಕಟ್ಟಡ ಉದ್ಘಾಟನೆ ಮಾಡಿಸುವ ಕೆಲಸ ಮಾಡುತ್ತೇನೆ ಎಂದರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸದೇ ಮೌನಕ್ಕೆ ಶರಣಾದರು. ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಈ ಬಗ್ಗೆ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಹೈಕಮಾಂಡ್ ಮುಖ್ಯಮಂತ್ರಿಗಳಿಗೆ ಸೂಚನೆ ನೀಡ್ತಾರೆ. ಅದನ್ನು ಬಿಟ್ಟು ನನಗೇನು ಗೊತ್ತಿಲ್ಲ ಎಂದರಲ್ಲದೆ, ಡಿಸಿಎಂ ಕುರಿತ ಪ್ರಶ್ನೆಗೂ ಉತ್ತರಿಸದೆ ಅಲ್ಲಿಂದ ತೆರಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: