ಮೈಸೂರು

ತಂಬಾಕು ರೈತರ ಸಮಸ್ಯೆಗೆ ಸ್ಪಂದಿಸುವಂತೆ ಸಚಿವೆ ನಿರ್ಮಲ ಸೀತರಾಮನ್ ಗೆ ಪ್ರತಾಪ್ ಸಿಂಹ ಮನವಿ

ತಂಬಾಕು ರೈತರ ಸಮಸ್ಯೆಗೆ ತುರ್ತು ಹಸ್ತಕ್ಷೇಪ ಕೋರಿ ಸಂಸದ ಪ್ರತಾಪ್ ಸಿಂಹ ಸಚಿವೆ ನಿರ್ಮಲ ಸೀತರಾಮನ್ ಅವರಲ್ಲಿ ಮನವಿ ಸಲ್ಲಿಸಿದರು.

ಸಂಸದ ಪ್ರತಾಪ್ ಸಿಂಹ  ಮಂಗಳವಾರ ಸಚಿವೆ ಸೀತಾರಾಮನ್ ಅವರನ್ನು ನವ ದೆಹಲಿಯ ಅವರ ಕಛೇರಿಯಲ್ಲಿ ಭೇಟಿ ಮಾಡಿ ಕಳೆದ 2016ನೇ ಸಾಲಿನಲ್ಲಿ ಹಿಂದೆಂದೂ ಕಾಣದ ಬರದಿಂದ ತಂಬಾಕು ಬೆಳೆ ಹೊರತುಪಡಿಸಿ ಇನ್ನಿತರ ಎಲ್ಲಾ ಬೆಳೆಗಳು ಹಾಳಾಗಿರುವೆ. ತಂಬಾಕಿಗೆ ಸ್ಥಿರ ರಫ್ತಿನ ಬೇಡಿಕೆ ಇರುವುದರಿಂದ ರೈತರು ತೃಪ್ತಿಕರ ಬೆಲೆ/ದರ ಪಡೆದಿದ್ದರೂ ಸಹ, ರೈತರು ಬೆಳೆದಿರುವ ನಿಗದಿ ಪಡಿಸಿದ ತಂಬಾಕಿಗಿಂತ ಹೆಚ್ಚುವರಿ ಬೆಳದ ತಂಬಾಕಿಗೆ ವಿಧಿಸಿದ ಅಧಿಕ ದಂಡದಿಂದ ಕಂಗಾಲಾಗಿದ್ದಾರೆ ಎಂದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: