ದೇಶಪ್ರಮುಖ ಸುದ್ದಿ

ದೇಶದ ಅರ್ಥ ವ್ಯವಸ್ಥೆ ನಿರೀಕ್ಷೆಗಿಂತಲೂ ಹೆಚ್ಚು ವೇಗವಾಗಿ ಚೇತರಿಕೆ : ಆರ್ ಬಿ ಐ ಗವರ್ನರ್ ಶಕ್ತಿದಾಸ್

ದೇಶ( ಮುಂಬೈ)ನ.27:- ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ದೇಶದ ಅರ್ಥ ವ್ಯವಸ್ಥೆ ನಿರೀಕ್ಷೆಗಿಂತಲೂ ಹೆಚ್ಚು ವೇಗವಾಗಿ ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಬೇಡಿಕೆಯು ಹಬ್ಬಗಳ ಸಂದರ್ಭದ ಖರೀದಿ ಭರಾಟೆ ಮುಗಿದ ನಂತರ ಎಷ್ಟು ಸ್ಥಿರವಾಗಿ ಇರುತ್ತದೆ ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆಯು ಶೇಕಡ (-)23.9ರಷ್ಟು ಕುಸಿತ ಕಂಡಿದೆ. ಇಡೀ ಹಣಕಾಸು ವರ್ಷ ದಲ್ಲಿ ಜಿಡಿಪಿಯು ಶೇಕಡ (-)9.5ರಷ್ಟು ಕುಸಿತ ಕಾಣಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿದ್ದರೂ, ಕೊರೊನಾ ಸೋಂಕು ಯುರೋಪಿನ ಕೆಲವು ಕಡೆ ಗಳಲ್ಲಿ ಹಾಗೂ ಭಾರತದ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವುದು ಅರ್ಥ ವ್ಯವಸ್ಥೆಯ ಪಾಲಿಗೆ ಅಪಾಯಕಾರಿ ಎಂದು ಅವರು ಇದೇ ವೇಳೆ ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: