ಮೈಸೂರು

ಸಾಂಸ್ಕೃತಿಕ ಮತ್ತು ಕಲಾ ಪ್ರಕೋಷ್ಠಗಳ ವತಿಯಿಂದ ಪುರಸ್ಕೃತರಿಗೆ ಸನ್ಮಾನ

ಮೈಸೂರು ನಗರ ಬಿಜೆಪಿ ಕಚೇರಿಯಲ್ಲಿ ಸಾಂಸ್ಕೃತಿಕ ಮತ್ತು ಕಲಾ ಪ್ರಕೋಷ್ಠಗಳ ವತಿಯಿಂದ ಪುರಸ್ಕೃತರಿಗೆ ಸನ್ಮಾನ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಉದ್ಘಾಟಿಸಿದರು. ಜಿಲ್ಲಾ ಸಾಂಸ್ಕೃತಿಕ ಮತ್ತು ಕಲಾ ಪ್ರಕೋಷ್ಠಗಳ ಸಂಚಾಲಕ ವರಕೋಡು ಪ್ರಕಾಸ್ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹಿರಿಯರನ್ನು ಸನ್ಮಾನಿಸಲಾಯಿತು. ಕೆ.ಆರ್. ನಗರದ ಅಂತರರಾಷ್ಟ್ರೀಯ ಯೋಗಪಟು ಮುದ್ದುಕೃಷ್ಣಾ, ಗಾಯಕ ರಾಘವೇಂದ್ರ ರತ್ನಾಕರ್, ಟಿ.ನರಸೀಪುರ ಕುರುಬೂರಿನ ರಾಷ್ಟ್ರೀಯ ಕೋ ಕೋ ಚಾಂಪಿಯನ್ ಮೇಘ, ರಂಗಕರ್ಮಿ ಕಿರಸಗೂರು ರಾಜಪ್ಪ ಹಾಗೂ ರಂಗಕರ್ಮಿ ನಿವೃತ್ತ ವಿಜ್ಞಾನಿ ಶ್ರೀನಿಧಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ  ಅಧ್ಯಕ್ಷರುಗಳಾದ ಹೇಮಂತ್ ಕುಮಾರ್ ಗೌಡ, ರಾಮಕೃಷ್ಣಪ್ಪ, ಎಸ್.ಆರ್.ಗೋಪಾಲ್ ರಾವ್, ಜಿಲ್ಲಾ ಕಾರ್ಯದರ್ಶಿಗಳಾದ ಎನ್.ರಾಜ್ ಕುಮಾರ್, ಬೋರೇಗೌಡ, ಮಾಜಿ ವಸ್ತು ಪ್ರದರ್ಶನ ಅಧ್ಯಕ್ಷ ಎಸ್.ಟಿ.ಮಹೇಂದ್ರ , ಮಾನಸ ಗಂಗೋತ್ರಿ ವಿಶ್ವಕೋಶ ವಿಭಾಗದ ಶಾಮಸುಂದರ್, ಕಾರ್ಯಾಲಯ ಕಾರ್ಯದರ್ಶಿ ಹಿನಕಲ್ ಪಾಪಣ್ಣ, ಪ್ರಕೋಷ್ಠದ ಸಹಸಂಚಾಲಕ ಕೃಷ್ಣಮೂರ್ತಿ , ಮಹದೇವಸ್ವಾಮಿ, ಶಿವಬಸಪ್ಪ ಸೇರಿದಂತೆ ಎಲ್ಲ ಸಂಚಾಲಕರು ಉಪಸ್ಥಿತರಿದ್ದರು. (ಎಸ್.ಎಚ್)

 

Leave a Reply

comments

Related Articles

error: