ಮನರಂಜನೆ

‘ಗಣೇಶ್ ಮೆಡಿಕಲ್ಸ್’ಗೆ ನೀನಾಸಂ ಸತೀಶ್ ನಾಯಕ

ನೀರ್‍ದೋಸೆ ಯಶಸ್ವೀ ಜೋಡಿಗಳಾದ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನಿರ್ಮಾಪಕ ಪ್ರಸನ್ನ ಅವರು ಸ್ಯಾಂಡಲ್‍ವುಡ್‍ಗೆ ಮತ್ತೊಂದು ಸಿನಿಮಾ ನೀಡುವ ತಯಾರಿ ನಡೆಸಿದ್ದು, ‘ಗಣೇಶ್ ಮೆಡಿಕಲ್ಸ್’ ಶೀರ್ಷಿಕೆಯ ಈ ಚಿತ್ರಕ್ಕೆ ನಾಯಕ ನಟನಾಗಿ  ನೀನಾಸಂ ಸತೀಶ್  ಆಯ್ಕೆಯಾಗಿರುವುದು ಖಚಿತವಾಗಿದೆ.

ಚಿತ್ರವು ಪ್ರಸಕ್ತ ಸಾಲಿನ ಸೆಪ್ಟೆಂಬರ್‍ ಅಥವಾ ಅಕ್ಟೋಬರ್‍ನಲ್ಲಿ ಆರಂಭಗೊಳ್ಳಲಿದೆ. ಚಿತ್ರದ ನಾಯಕ  ನೀನಾಸಂ ಸತೀಶ್  ವಿಜಯ್ ಪ್ರಸಾದ್ ರೊಂದಿಗೆ   ಕೆಲಸ ಮಾಡಲು ಉತ್ಸುಕರಾಗಿದ್ದು ‘ಬ್ಯೂಟಿಫುಲ್ ಮನಸುಗಳು’ ನಂತರ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುವ ಅವಕಾಶ ದೊರೆತಿರುವುದು ಖುಷಿ ತಂದಿದೆ. ಚಿತ್ರದ ಕಥೆಯೂ ನನಗಾಗಿಯೇ ಹೆಣೆದಂತಿದೆ ಎನ್ನುವ ಭಾವನೆ ನನಗೆ ಮೂಡಿದೆ ಎಂದಿದ್ದಾರೆ. ಸದ್ಯಕ್ಕೆ ಟೈಗರ್ ಗಲ್ಲಿ ಹಾಗೂ ಚಂಬಲ್ ಚಿತ್ರಗಳ ಶೂಟಿಂಗ್‍ನಲ್ಲಿ ಸತೀಶ್ ಬ್ಯುಸಿಯಾಗಿದ್ದಾರೆ.

(ಕೆ.ಎಂ.ಆರ್)

Leave a Reply

comments

Related Articles

error: