ದೇಶಪ್ರಮುಖ ಸುದ್ದಿ

ದೆಹಲಿ ತಲುಪಿದ ಪ್ರತಿಭಟನಾ ನಿರತ ರೈತರು: ತೀವ್ರ ಭದ್ರತೆ; ಪ್ರಯಾಣಿಕರ ಪರದಾಟ

ನವದೆಹಲಿ,ನ.28-ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ ಭಾಗದ ರೈತರ ಪ್ರತಿಭಟನೆ ಮುಂದುವರಿದಿದ್ದು, ರೈತರು ರಾಷ್ಟ್ರ ರಾಜಧಾನಿ ದೆಹಲಿಗೆ ತಲುಪಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಸದ್ಯ ರೈತರು ಟಿಕ್ರಿ ಭಾಗದಲ್ಲಿ ಪ್ರತಿಭಟನೆ ನಡೆಸಲು ಸೇರಿದ್ದು, ಅಲ್ಲಿನ ಬುರಾರಿ ಪ್ರದೇಶದ ನಿರಂಕಾರಿ ಸಮಾಗಮ ಮೈದಾನದಲ್ಲಿ ಪ್ರದರ್ಶನ ನಡೆಸಲು ರೈತರಿಗೆ ಅನುಮತಿ ನೀಡಲಾಗಿದೆ. ಅಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.

ಇನ್ನು ರೈತರು ದೆಹಲಿ ಸಮೀಪಿಸುತ್ತಿದ್ದಂತೆ ಪರಿಸ್ಥಿತಿ ಬಿಗಡಾಯಿಸಿದೆ. ವಾಹನ ಸವಾರರು ಸಂಚಾರ ದಟ್ಟಣೆ, ಬದಲಿ ಸಂಚಾರ ಮಾರ್ಗಗಳನ್ನು ಪೊಲೀಸರು ಕಲ್ಪಿಸಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ದೆಹಲಿ ಮತ್ತು ಎನ್ ಸಿಆರ್ ನಗರಗಳ ಮಧ್ಯೆ ವಾಹನ ಸಂಚಾರ ತೀವ್ರ ಅಡಚಣೆಯುಂಟಾಗಿದೆ. ಎನ್ ಸಿಆರ್, ಕೇಂದ್ರ ದೆಹಲಿ, ಪಂಜಾಬಿ ಬಾಗ್, ನೈರುತ್ಯ ಮತ್ತು ಆಗ್ನೇಯ ದೆಹಲಿಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹರ್ಯಾಣದ ಗಡಿಭಾಗದ ಸಿಂಘು, ಟಿಕ್ರಿ, ಧನ್ಸ, ಜಾರೊಡ ಕಲನ್ ಗಳಲ್ಲಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: