ದೇಶಪ್ರಮುಖ ಸುದ್ದಿ

ಗೋವಾದಲ್ಲಿ 2 ವಾರದಲ್ಲಿ ಬಂದ್‍ ಆಗಲಿವೆ ತಡರಾತ್ರಿ ಪಾರ್ಟಿ, ರೇವ್ ಪಾರ್ಟಿ

ಪಣಜಿ : ಪ್ರವಾಸ ಮತ್ತು ಪಾರ್ಟಿಗಳಿಗೆ ಹೆಸರಾಗಿರುವ ಗೋವಾದಲ್ಲಿ ಮುಂದಿನ ಎರಡು ವಾರ ಕಾಲ ತಡರಾತ್ರಿ ಪಾರ್ಟಿ ಮತ್ತು ರೇವ್‍ ಪಾರ್ಟಿಗಳನ್ನು ಸರ್ಕಾರ ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.

ಕಡಲ ತೀರಗಳಲ್ಲಿ ನಡೆಯುವ ರೇವ್ ಪಾರ್ಟಿಗಳನ್ನು ನಿಷೇಧಿಸುವಂತೆ ಗೋವಾ ಸರ್ಕಾರದ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಒತ್ತಾಯಿಸಿದ ಕಾರಣ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಗೋವಾ ಸರ್ಕಾರ ಶೇ. 80ರಷ್ಟು ಪಾರ್ಟಿಗಳನ್ನು ರದ್ದುಗೊಳಿಸಿದೆ, ಇನ್ನೆರಡು ವಾರಗಳಲ್ಲಿ ಎಲ್ಲ ತಡರಾತ್ರಿ ಮತ್ತು ರೇವ್‍ಪಾರ್ಟಿಗಳು ಸ್ಥಗಿತವಾಗಲಿವೆ. ಈ ಸಂಬಂಧ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಕರಾವಳಿ ತೀರ ಈಗಾಗಲೇ ಡ್ರಗ್ಸ್ ಮಾರಾಟ ಮತ್ತು ಕಳ್ಳಸಾಗಣೆಗೆ ಕುಖ್ಯಾತಿಯಾಗಿದೆ, ಇದನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಎಲ್ಲಕ್ಕಿಂತ ಮೊದಲು ರೇವ್ ಪಾರ್ಟಿ ಮತ್ತು ಎಲ್ಲಾ ರೀತಿಯ ನೈಟ್ ಪಾರ್ಟಿಗಳನ್ನು ನಿಯಂತ್ರಿಸಬೇಕಾಗಿದೆ ಎಂದು ಹೇಳಿದ್ದಾರೆ. ಸಂಸ್ಕೃತಿಗೆ ವಿರುದ್ಧವಾಗಿ ಪಾರ್ಟಿ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಇದೆಲ್ಲಾ ಸಂಸ್ಕೃತಿಯಲ್ಲ, ಇಂಥ ಕಾರ್ಯಕ್ರಮಗಳಿಗೆಲ್ಲಾ ನಾವು ಪ್ರೋತ್ಸಾಹಿಸುವುದು ಸರಿಯಲ್ಲ. ಹೀಗಾಗಿ ಕೂಡಲೇ ಇಂಥ ಪಾರ್ಟಿ ನಡೆಸುವ ಸ್ಥಳಗಳನ್ನು ಮುಚ್ಚಬೇಕು ಎಂದು ಹೇಳಿದ್ದಾರೆ.

(ಎನ್‍.ಬಿ.ಎನ್‍)

Leave a Reply

comments

Related Articles

error: