ಕ್ರೀಡೆದೇಶಪ್ರಮುಖ ಸುದ್ದಿ

ಬಾಕ್ಸಿಂಗ್ ಪಟು ದುರ್ಯೋಧನ ಸಿಂಗ್‌ ನೇಗಿಗೆ ಕೊರೋನಾ ಸೋಂಕು

ದೇಶ( ನವದೆಹಲಿ)ನ.30:- ಬಾಕ್ಸಿಂಗ್ ಪಟು ದುರ್ಯೋಧನ ಸಿಂಗ್‌ ನೇಗಿ ಅವರಲ್ಲಿ ಕೋವಿಡ್‌-19 ಪತ್ತೆಯಾಗಿದ್ದು, ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಹೇಳಿದೆ.

ಮಾಜಿ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ದುರ್ಯೋಧನ, ದೀಪಾವಳಿ ಹಬ್ಬ ಮುಗಿಸಿಕೊಂಡು ಪಟಿಯಾಲದಲ್ಲಿರುವ ತರಬೇತಿ ಶಿಬಿರಕ್ಕೆ ಮರಳಿದ್ದರು. ಕ್ವಾರಂಟೈನ್‌ನಲ್ಲಿದ್ದ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಪತ್ತೆಯಾಗಿದೆ.

69 ಕೆಜಿ ವೆಲ್ಟರ್‌ವೇಟ್‌ ವಿಭಾಗದಲ್ಲಿ ಸ್ಫರ್ಧಿಸುವ ನೇಗಿ, ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹೋದ ವರ್ಷ ನಡೆದ ವಿಶ್ವ ಚಾಂಪಿಯನ್‌ ಷಿಪ್‌ನಲ್ಲೂ ಅವರು ಕಣಕ್ಕಿಳಿದಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: