ಕರ್ನಾಟಕಪ್ರಮುಖ ಸುದ್ದಿಮೈಸೂರು

ಜಿಲ್ಲಾಧಿಕಾರಿ –ಜನಪ್ರತಿನಿಧಿಗಳ ಗುದ್ದಾಟ ಹಿನ್ನೆಲೆ : ಜನಸ್ಪಂದನ ಕಾರ್ಯಕ್ರಮ ರದ್ದು; ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ; ಸಚಿವ ಆರ್.ಅಶೋಕ್ ಮಾಹಿತಿ

ಮೈಸೂರು,ನ.30:- ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜನಪ್ರತಿನಿಧಿಗಳ ಗುದ್ದಾಟ ವಿಚಾರಕ್ಕೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿ ಜನಸ್ಪಂದನ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ ಎಂದರು.
ಮೈಸೂರಿನಲ್ಲಿಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ನಿನ್ನೆ ಜಿಲ್ಲಾಧಿಕಾರಿ ನನ್ನ ಭೇಟಿ ಮಾಡಿದ್ದರು. ಈ ವೇಳೆ ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿದ್ದೇನೆ. ಜನಸ್ಪಂದನಾ ಕಾರ್ಯಕ್ರಮದ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು ಎಂಬುದನ್ನು ತಿಳಿಸಿದ್ದೇನೆ. ಈಗ ಜನಸ್ಪಂದನ ಕಾರ್ಯಕ್ರಮ ಇರುವುದಿಲ್ಲ. ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ವೇಳೆ ಜನರ ಅಹವಾಲುಗಳನ್ನು ಕೇಳಲಾಗುತ್ತದೆ. ಈ ಬೆಳವಣಿಗೆಯಿಂದ ಸಾರ್ವಜನಿಕರಿಗೆ ಅನಾನೂಕೂಲವಾಗಿದೆ. ಇದನ್ನು ನಾನು ಒಪ್ಪುತ್ತೇನೆ ಆದರೆ ಇಂದಿನಿಂದ ಅದು ಆಗುವುದಿಲ್ಲ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮುನಿರತ್ನ, ಎಂಟಿಬಿ ನಾಗರಾಜ್, ಶಂಕರ ಸೇರಿ ಹಲವರು ತ್ಯಾಗ ಮಾಡಿದ್ದಾರೆ. ಅದರಿಂದ ನಮ್ಮ ಸರ್ಕಾರ ಬಂದಿದೆ. ಅವರನ್ನು ಮಂತ್ರಿ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಈ ಬಗ್ಗೆ ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ . ನಾವು ಸಹಾ ಹೈ ಕಮಾಂಡ್ ನಿರ್ದೇಶನಕ್ಕೆ ಕಾಯುತ್ತಿದ್ದೇವೆ ಎಂದರು.
ಸಂತೋಷ್ ಆತ್ಮಹತ್ಯೆಗೆ ವಿಡಿಯೋ ಸಿಡಿ ಕಾರಣ ಎಂದಿರುವ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಡಿ ಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಉಪಚುನಾವಣೆ ನಂತರ ಅವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಸಂತೋಷ್ ಮರೆವಿನಿಂದ ನಿದ್ರೆ ಮಾತ್ರೆ ನುಂಗಿರಬಹುದು ಅಥವಾ ಯಾವ ಕಾರಣಕ್ಕೆ ನಿದ್ದೆ ಮಾತ್ರೆ ನುಂಗಿದರು ,ಇದನ್ನು ಸಂತೋಷ ಅವರೇ ಹೇಳಬೇಕು. ಅವರಿಗ ಚೇತರಿಸಿಕೊಂಡಿದ್ದಾರೆ ಅವರ ಹೇಳಿಕೆ ನಂತರ ಎಲ್ಲವೂ ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇದು ರಾಜ್ಯದಲ್ಲಿ ಮಾತ್ರ ಗಿರಿಗಿಟ್ಲೆ ಹೊಡೆಯುತ್ತಿದೆ. ದೆಹಲಿ ನಾಯಕರ ಮುಂದೆ ನಾಯಕತ್ವ ಬದಲಾವಣೆ ವಿಚಾರ ಇಲ್ಲ. ಯಡಿಯೂರಪ್ಪ ಯಾವುದೇ ತಪ್ಪು ಮಾಡದೆ ಅವರನ್ನು ಬದಲಾಯಿಸುವುದು ಸರಿಯಲ್ಲ. ಈ ಬಗ್ಗೆ ಕೇಂದ್ರದ ಐವರು ನಾಯಕರನ್ನು ಭೇಟಿ ಮಾಡಿದ್ದೇನೆ. ಅವರು ಈ ವಿಚಾರವನ್ನು ನಿರಾಕರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಒಕ್ಕಲಿಗರ ನಿಗಮ ಪ್ರಾಧಿಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇದು ಗಾಳಿಯಲ್ಲಿ ಹೊಡೆದ ಗುಂಡಲ್ಲ ನಿಜವಾದ ಗುಂಡು.ನಾನು ಈ ಬಗ್ಗೆ ಸಿಎಂ ಅವರ ಜೊತೆ ಚರ್ಚೆ ಮಾಡಿದ್ದೇನೆ. ಯಡಿಯೂರಪ್ಪ ಅವಧಿಯಲ್ಲೇ ಒಕ್ಕಲಿಗರ ಪ್ರಾಧಿಕಾರ ಆಗಲಿದೆ. ಈ ಸಂಬಂಧ ಸಮಾಜದ ಮುಖಂಡರು ಸ್ವಾಮೀಜಿಗಳು ಸಂಘ ಸಂಸ್ಥೆಯವರು ನನ್ನ ಜೊತೆ ಮಾತನಾಡಿದ್ದಾರೆ. ಈ ವಿಚಾರಕ್ಕೆ ನಾನು ಬದ್ದನಾಗಿದ್ದೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: