ಮೈಸೂರು

ಅನ್ವೇಷಣಾ ಟ್ರಸ್ಟ್ ವತಿಯಿಂದ ಒಡೆಯರ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ


ಮೈಸೂರು,ನ.30:- ಅರ್ಹತೆ ಇದ್ದು ಅವಕಾಶ ವಂಚಿತರಾದವರ ಅನ್ವೇಷಣೆ ನಡೆಸುವ ಅನ್ವೇಷಣಾ ಟ್ರಸ್ಟ್ ವತಿಯಿಂದ ಒಡೆಯರ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನಿಂದು ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಮೈಸೂರು ವಿವಿ ಭತಶಾಸ್ತ್ರ ಅಧ್ಯಯನ ವಿಭಾಗದ ಪಿಎನ್ ಇ ಬಿ ನಿರ್ದೇಶಕ ಲೋಕನಾಥ್ ಎನ್.ಕೆ, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಅವರಿಗೆ, ಸಮಾಜ ಸೇವಕ ಎಂ.ಲಲಿತ್ ಕುಮಾರ್ ಕೋಠಾರಿ ಅವರಿಗೆ, ಸುಮನ ಸೊಸೈಟಿ ಸಂಯೋಜಕ ಅಲಿಸ್ ಜೋಸೆಫ್ ಅವರಿಗೆ, ಶಿಕ್ಷಕರಾದ ಡಾ.ಪಿ.ಬಿ.ಇಂದುಕಲಾ ಅರಸ್ ಅವರಿಗೆ ಹಾಗೂ ಎಲೈ ಉನ್ನತ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ಮೊಹಮ್ಮದ್ ನಸರುಲ್ಲಾ ಅವರಿಗೆ ಒಡೆಯರ್ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನಿಸಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಮಹಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಶಿವಕುಮಾರ್ ಪಾಲ್ಗೊಂಡಿದ್ದರು.
ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್ ಅರಸ್, ಸಂಸ್ಥಾಪಕ ಗೌರವ ಕಾರ್ಯದರ್ಶಿ ಅಮರನಾಥ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: