ದೇಶಪ್ರಮುಖ ಸುದ್ದಿ

ಕೇಜ್ರಿವಾಲ್ ಸರ್ಕಾರದ ಆದೇಶದಂತೆ ದೆಹಲಿಯ ಖಾಸಗಿ ಲ್ಯಾಬ್ ‌ನಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಈಗ 800 ರೂ.

ದೇಶ(ನವದೆಹಲಿ)ಡಿ.1:- ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೋನಾದ ಹೊಸ ಪ್ರಕರಣಗಳ ದೃಷ್ಟಿಯಿಂದ ಕೇಜ್ರಿವಾಲ್ ಸರ್ಕಾರವು ಪರೀಕ್ಷೆಯನ್ನು ಹೆಚ್ಚಿಸುವ ಮತ್ತು ಅದರ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಖಾಸಗಿ ಲ್ಯಾಬ್ ‌ಗಳಲ್ಲಿ ಮಾಡಬೇಕಾದ ಆರ್‌ಟಿ-ಪಿಸಿಆರ್ ಪರೀಕ್ಷೆಗಳ ಬೆಲೆಯನ್ನು ನಿಗದಿಪಡಿಸಿದೆ.

ಇದರ ಬೆಲೆಯನ್ನು ಈಗ 800 ರೂಪಾಯಿಗೆ ಇಳಿಸಲಾಗಿದೆ.ಆದರೆ ಮನೆಯಿಂದ ಸ್ಯಾಂಪಲ್ ‌ಗಳನ್ನು ತೆಗೆದುಕೊಳ್ಳಲು 1200 ರೂಪಾಯಿ ಖರ್ಚು ಮಾಡಬೇಕಾಗಲಿದೆ. ಅಂದಹಾಗೆ, ದೆಹಲಿಯಲ್ಲಿ ಸರಕಾರದ ಕಡೆಯಿಂದ ನಡೆಯುತ್ತಿರುವ ಕೊರೋನಾದ ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಸಂಪೂರ್ಣವಾಗಿ ಉಚಿತ. ಇದಕ್ಕೂ ಮೊದಲು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಸೂಚನೆ ನೀಡಿದ್ದೇನೆ. ಈ ಪರೀಕ್ಷೆಯನ್ನು ಸರ್ಕಾರವು ಉಚಿತವಾಗಿ ನಡೆಸುತ್ತಿದೆ, ಆದರೆ, ಖಾಸಗಿ ಲ್ಯಾಬ್‌ ಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ಜನರಿಗೆ ಅಲ್ಲಿ ಅದರ ಶುಲ್ಕವನ್ನು ಕಡಿಮೆ ಮಾಡುವ ಮೂಲಕ ಅವರಿಗೆ ಸಹಾಯ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: