ಮೈಸೂರು

ಶ್ರೀ ಸುತ್ತೂರು ಶಾಖಾಮಠದಲ್ಲಿ 224ನೇ ಬೆಳದಿಂಗಳ ಸಂಗೀತ

ಮೈಸೂರು,ಡಿ.1:- ಮೈಸೂರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ನಿನ್ನೆ ಹುಣ್ಣಿಮೆಯ ಪ್ರಯುಕ್ತ ಡಿಜಿಟಲ್ ಮಾಧ್ಯಮದ ಮೂಲಕ 224ನೇ ಬೆಳದಿಂಗಳ ಸಂಗೀತ ಕಾರ್ಯಕ್ರಮ ನಡೆದಿದ್ದು, ವಿದುಷಿ ಲಕ್ಷ್ಮಿ ನಾಗರಾಜ್ ಅವರು ಗಾಯನ ಪ್ರಸ್ತುತ ಪಡಿಸಿದರು.
ಪಕ್ಕ ವಾದ್ಯದಲ್ಲಿ ವಿದ್ವಾನ್ ಸಿ.ಎನ್. ಕೇಶವದತ್ತ, ವಿದ್ವಾನ್ ಎಸ್. ಮಂಜುನಾಥ್ ಹಾಗೂ ವಿದ್ವಾನ್ ಮತ್ತೂರು ಶ್ರೀನಿಧಿಯವರು ಸಹಕರಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: