ಮೈಸೂರು

ಇಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಮೈಸೂರು. ಡಿ.2:- ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 3ನೇ ಹಂತದ ಕೊಳವೆ ಮಾರ್ಗ ದುರಸ್ಥಿ ಕಾಮಗಾರಿಯನ್ನು ಡಿ. 2ರಂದು ಹಮ್ಮಿಕೊಂಡಿರುವುದರಿಂದ ವಾರ್ಡ್ ನಂ.1 ರಿಂದ 6, ವಾರ್ಡ್ ನಂ.20, 23, ವಾರ್ಡ್ ನಂ. 42 ರಿಂದ 45, ವಾರ್ಡ್ ನಂ. 47 ಇದಕ್ಕೆ ಸಂಬಂಧಪಟ್ಟ ಡಿ.ಎಮ್.ಡಿ ಪ್ರದೇಶಗಳಾದ ಹೆಬ್ಬಾಳ್, ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಕೆ.ಜಿ ಕೊಪ್ಪಲು, ಲೋಕನಾಯಕನಗರ, ಒಂಟಿಕೊಪ್ಪಲು, ಪಡುವಾರಳ್ಳಿ, ಶಾರದದೇವಿ ನಗರ, ಸರಸ್ವತಿಪುರಂ, ಬೋಗಾದಿ, ವಿಜಯ ನಗರ1,3ನೇ ಹಂತ, ಗೋಕುಲಂ 1, 2,3 ನೇ ಹಂತ, ಹಾಗೂ ಹೊರವಲಯಗಳಾದ ಆರ್.ಎಂ.ಪಿ, ಬಿ.ಇ.ಎಂ.ಎಲ್, ಜನತಾ ನಗರ, ಕೆ,ಹೆಚ್.ಬಿ ಕಾಲೋನಿ, ಹೂಟಗಳ್ಳಿ, ವಿಜಯನಗರ 2ನೇ ಹಂತ ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ನೀರು ವ್ಯತ್ಯಯವಾಗಲಿದೆ ಎಂದು ಮಹಾನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: