ಮೈಸೂರು

ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾಗಿ ಅಪ್ಪಣ್ಣ ನೇಮಕ

ಮೈಸೂರು,ಡಿ.2:- ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ(ಜಂಗಲ್ ಲಾಡ್ಜ್ಸ್ &ರೆಸಾರ್ಟ್ಸ್) ಅಧ್ಯಕ್ಷರನ್ನಾಗಿ ಮೈಸೂರಿನ ಅಪ್ಪಣ್ಣ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಇವರು ಸದ್ಯ ಮಹರ್ಷಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳಾಗಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಐದು ಜಿಲ್ಲೆಗಳಲ್ಲಿ ನಾಯಕ ಸಮಾಜದ ಮುಖಂಡರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಸಿಎಂ ಬಿಎಸ್ ವೈ ಅವರು ನನ್ನನ್ನು ನೇಮಕ ಮಾಡಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದ ಪ್ರೀತಂ ಜಿ.ಗೌಡ ಅವರಿಗೆ ಜಣಗಲ್ ಲಾಡ್ಜ್ಸ್ &ರೆಸಾರ್ಟ್ಸ್ ಅಧ್ಯಕ್ಷ ಹುದ್ದೆ ನೀಡಿ ಜು.27ರಂದು ಆದೇಶ ಹೊರಡಿಸಲಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಅವರು ಹುದ್ದೆಯಲ್ಲಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: