ಲೈಫ್ & ಸ್ಟೈಲ್

ಪುರುಷರ ಆರೋಗ್ಯದ ಗುಟ್ಟು ಮೊಸರಲ್ಲಿದೆ!

ಮೆಸಾಚ್ಯುಸೆಟ್ಸ್ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧನೆಯ ಪ್ರಕಾರ ಪುರುಷರು ಮೊಸರನ್ನು ಸೇವಿಸಿದಲ್ಲಿ ಅದರಿಂದ ಹಲವು ಉಪಯೋಗಗಳಾಗಲಿವೆ. ಇದರಲ್ಲಿರುವ ನ್ಯೂಟ್ರಿಆ್ಯಂಟ್ಸ್ ಗಳು ಹಲವು ರೋಗಗಳನ್ನು ಶಮನಗೊಳಿಸುತ್ತವೆ. ಮುಖ್ಯವಾಗಿ ಪುರುಷರಲ್ಲಿನ ಫಲವಂತಿಕೆಯನ್ನು ಹೆಚ್ಚಿಸುತ್ತದೆ.

ವೀರ್ಯಾಣು ವೃದ್ಧಿ : ಮೊಸರನ್ನು ಸೇವಿಸುವುದರಿಂದ ಟೆಸ್ಟೊಸ್ಟೆರಾನ್ ಹಾರ್ಮೋನ್ ಸಮತೋಲನದಲ್ಲಿರುತ್ತದೆ. ಇದರಿಂದ ವೀರ್ಯಾಣು ವೃದ್ಧಿಯಾಗಲಿದೆ.

ಬಿಪಿ ಕಂಟ್ರೋಲ್ : ಇದರಲ್ಲಿ ಪೋಟ್ಯಾಶಿಯಂ ಹೇರಳವಾಗಿದ್ದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಹಾರ್ಟ್ ಗೆ ಒಳ್ಳೆಯದು : ನಿಯತವಾಗಿ ಮೊಸರು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗಲಿದೆ. ಇದರಿಂದ ಹೃದಯಸಂಬಂಧಿ ಸಮಸ್ಯೆಗಳು ದೂರಾಗಲಿವೆ.

ನೋವು ಶಮನ : ಇದರಲ್ಲಿ ಕ್ಯಾಲ್ಶಿಯಂ ಹೇರಳವಾಗಿದ್ದು, ಸಂಧಿಸೋವುಗಳ ಸಮಸ್ಯೆ ನಿವಾರಣೆಯಾಗಲಿದೆ. ಮೊಣಕಾಲುಗಳಲ್ಲಿ ನೋವು ಬರುವುದಿಲ್ಲ.

ಬಲಿಷ್ಠ ಮಾಂಸಖಂಡ : ಇದರಲ್ಲಿ ಪ್ರೊಟೀನ್ ಹೇರಳವಾಗಿದ್ದು, ಮಾಂಸಖಂಡಗಳನ್ನು ಬಲಿಷ್ಠವಾಗಿಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ : ಮೊಸರು ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನೆಗಡಿ-ಶೀತಗಳಿಂದ ದೂರವಿರಲು ಸಹಕರಿಸುತ್ತದೆ.

ಮನಸ್ಸು ಪ್ರಶಾಂತ : ಇದರಲ್ಲಿ ಒಳ್ಳೆಯ ಬ್ಯಾಕ್ಟಿರಿಯಾಗಳಿರುತ್ತವೆ. ಮನಸ್ಸನ್ನು ಪ್ರಶಾಂತವಾಗಿರಿಸಲಿದೆ.

ಸ್ಟೆಮಿನಾ : ಇದರಲ್ಲಿ ಪ್ರೊಬಯೊಟಿಕ್ ಬ್ಯಾಕ್ಟಿರಿಯಾ ಇದ್ದು, ಮೊಸರನ್ನು ಸೇವಿಸುವುದರಿಂದ ಶಕ್ತಿ ದೊರಕಲಿದೆ. ಮತ್ತು ಸ್ಟೆಮಿನಾ ಹೆಚ್ಚಲಿದೆ.

ಸ್ಮಾರ್ಟ್ ನೆಸ್ : ಮೊಸರನ್ನು ಸೇವಿಸುವುದರಿಂದ ಶರೀರದಲ್ಲಿ ತೇವಾಂಶದಿಂದ ಕೂಡಿರಲಿದೆ. ಇದರಿಂದ ಹೊಳೆಯುವ ತ್ವಚೆ ನಿಮ್ಮದಾಗುವುದಲ್ಲದೇ ಸ್ಮಾರ್ಟ್ ನೆಸ್ ಹೆಚ್ಚಲಿದೆ.

ಬೊಜ್ಜು ನಿಯಂತ್ರಣ : ಮೊಸರು ದೇಹದ ತೂಕವನ್ನು ಹೆಚ್ಚಿಸುವ ಹಾರ್ಮೋನ್ ಆದ ಕಾರ್ಟಿಸೋಲ್ ನ ಲೆವೆಲ್ ನ್ನು ನಿಯಂತ್ರಣದಲ್ಲಿಡಲಿದೆ. ಇದರಿಂದ ಬೊಜ್ಜು ಬರಲಾರದು.

ಮೊಸರು ಸೇವನೆಯಿಂದ ಹಲವು ರೀತಿಯಲ್ಲಿ ಉಪಯೋಗವಾಗಲಿದೆ.  (ಎಸ್.ಎಚ್)

 

Leave a Reply

comments

Related Articles

error: