ಕರ್ನಾಟಕಪ್ರಮುಖ ಸುದ್ದಿ

ಮಂಗಳೂರು ದೋಣಿ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ; ಮೂವರಿಗಾಗಿ ಮುಂದುವರೆದ ಶೋಧ ಕಾರ್ಯ

ಮಂಗಳೂರು,ಡಿ.2-ಮೀನುಗಾರಿಕೆ ತೆರಳಿದ್ದ ದೋಣಿಯು ಮಗುಚಿಬಿದ್ದು ನಾಪತ್ತೆಯಾಗಿದ್ದ ಮೀನುಗಾರರ ಪೈಕಿ ಇಂದು ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆಯಾಗಿದೆ.

ಅನ್ಸಾರ್ (31) ಎಂಬ ಮೀನುಗಾರನ ಮೃತದೇಹ ಪತ್ತೆಯಾಗಿದೆ. ಬೋಳಾರದ ಶ್ರೀ ರಕ್ಷಾ ಮೀನುಗಾರಿಕಾ ಬೋಟ್ ಅರಬ್ಬಿ ಸಮುದ್ರದಲ್ಲಿ ಸೋಮವಾರ ರಾತ್ರಿ ಮುಳುಗಡೆಯಾಗಿತ್ತು. ಈ ವೇಳೆ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದರು. ನಿನ್ನೆ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಇಂದು ಒಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನಿನ್ನೆ ಬೊಕ್ಕಪಟ್ನ ನಿವಾಸಿಗಳಾದ ಪಾಂಡುರಂಗ ಸುವರ್ಣ ಹಾಗೂ ಪ್ರೀತಂ ಅವರ ಮೃತದೇಹ ಪತ್ತೆಯಾಗಿತ್ತು. ಬೋಟ್ ನಲ್ಲಿ ಒಟ್ಟು 25 ಮಂದಿ ಇದ್ದರು. ಇವರಲ್ಲಿ 19 ಮಂದಿ ಪಾರಾಗಿದ್ದರು. 6 ಮಂದಿ ನಾಪತ್ತೆಯಾಗಿದ್ದರು. (ಎಂ.ಎನ್)

Leave a Reply

comments

Related Articles

error: