ಮೈಸೂರು

ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಉತ್ತಮ ಆರೋಗ್ಯಕ್ಕೆ ಪ್ರಾರ್ಥಿಸಿ ಅಭಿಮಾನಿಗಳಿಂದ ಪೂಜೆ

ಮೈಸೂರು,ಡಿ.2:- ಕರ್ನಾಟಕ ರಾಜ್ಯ ರವಿ ಡಿ ಚನ್ನಣ್ಣನವರ್ ಅಭಿಮಾನಿ ಬಳಗ” ಮೈಸೂರು ವತಿಯಿಂದ ಮೈಸೂರು ಅಗ್ರಹಾರದಲ್ಲಿ ಇರುವ 101 ಗಣಪತಿ ದೇವಸ್ಥಾನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಯು.ಪಿ.ಎಸ್.ಸಿ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ಬಡವರ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಿರುವ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿ ಡಿ ಚನ್ನಣ್ಣನವರ್ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಅಧ್ಯಕ್ಷ ದೇವರಾಜ್ ಟಿ ಕಾಟೂರು ಮಾತನಾಡಿ ಕರ್ನಾಟಕ ಪೊಲೀಸ್ ಸಿಂಗಂ ಖ್ಯಾತಿಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಬಡವರ ,ಶೋಷಿತ, ಹಿಂದುಳಿದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಯುಪಿಎಸ್ ಸಿ ಪರೀಕ್ಷೆಗೆ ತರಬೇತಿಯನ್ನು ನೀಡಿ, ಐಎಎಸ್ ,ಕೆಎಎಎಸ್ ತರಬೇತಿಯನ್ನು ನೀಡತಕ್ಕಂತಹ ಕೆಲಸವನ್ನು ಮಾಡುತ್ತಿದ್ದಾರೆ. ದಿನದ 24ಗಂಟೆಯೂ ಸಾರ್ವಜನಿಕರ ಮಧ್ಯೆ ಇದ್ದು ಪ್ರಾಮಾಣಿಕವಾಗಿ ಕೆಲಸ ಮಾಡುವ ರವಿ ಡಿ.ಚನ್ನಣ್ಣನವರ್ ಅವರ ಕಛೇರಿಯಲ್ಲಿ ಕೆಲವು ದಿನಗಳ ಹಿಂದೆ ಸಿಬ್ಬಂದಿಯೋರ್ವರಲ್ಲಿ ಕೋವಿಡ್ 19 ಕಾಣಿಸಿಕೊಂಡಿರುವುದರಿಂದ ರವಿ ಡಿ.ಚನ್ನಣ್ಣನವರಿಗೆ ಯಾವುದೇ ರೀತಿಯ ಆರೋಗ್ಯ ಕ್ಷಿಣಿಸದಿರಲಿ, ತಾಯಿ ಚಾಮುಂಡೇಶ್ವರಿ, ವಿಘ್ನೇಶ್ವರ ಅವರಿಗೆ ಆಯರಾರೋಗ್ಯ ನೀಡಲಿ ಎಂದು ಪ್ರಾರ್ಥಿಸಿ ಇಂದು ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದೇವೆ. ಅವರ ಸೇವೆ ರಾಜ್ಯಕ್ಕೆ ಅವಶ್ಯವಾಗಿದೆ ಎಂದು ತಿಸಿದರು. ಸಾರ್ವಜನಿಕವಾಗಿ ಜನರ ಮಧ್ಯೆ ಇದ್ದು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು ,ರೈತರು,ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು,ಯುವಕರು, ಬೀದಿಬದಿ ವ್ಯಾಪಾರಸ್ಥರು, ವಾಹನ ಸವಾರರು,ಅಟೋ ಚಾಲಕರು, ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ರವಿ ಡಿ.ಚನ್ನಣ್ಣನವರ್ ಅಭಿಮಾನಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: