ಮೈಸೂರು

ಸಮಾಜ ಘಾತುಕ ಕೃತ್ಯದಲ್ಲಿ ತೊಡಗಿಸಿಕೊಂಡರೆ ಕಠಿಣ ಕ್ರಮ : ರೌಡಿಗಳಿಗೆ ಎಚ್ಚರಿಕೆ

ಮೈಸೂರು,ಡಿ.2:- ಕೃಷ್ಣರಾಜ ವಿಭಾಗ ಮೈಸೂರು ನಗರ ವತಿಯಿಂದ ಕೃಷ್ಣರಾಜ ಪೊಲೀಸ್ ಠಾಣೆ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆ, ಪೊಲೀಸ್ ಠಾಣೆ ಅಶೋಕಪುರಂ ಹಾಗೂ ಲಕ್ಷ್ಮೀಪುರಂ ಪೊಲೀಸ್ ಠಾಣೆ ಮತ್ತು ಸರಸ್ವತಿಪುರಂ ಪೊಲೀಸ್ ಠಾಣೆ ವತಿಯಿಂದ ಎಸಿಪಿ ಕೃಷ್ಣರಾಜ ವಿಭಾಗ ಪೂರ್ಣಚಂದ್ರ ತೇಜಸ್ವಿ ಅವರ ನೇತೃತ್ವದಲ್ಲಿ ಹಾಗೂ ಎಸಿಪಿ ನರಸಿಂಹರಾಜ ವಿಭಾಗದ ಶಿವಶಂಕರ್ ಅವರ ನೇತೃತ್ವದಲ್ಲಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಶ್ರೀನಿವಾಸ ಪ್ರಕಾಶ್, ರಾಜು, ವೆಂಕಟೇಶ್ ಹಾಗೂ ವಿಜಯ್ ಕುಮಾರ್ ನೇತೃತ್ವದಲ್ಲಿ ರೌಡಿ ಪರೇಡ್ ನಡೆಯಿತು.
ಎಲ್ಲಾ ಕೆಆರ್ ಭಾಗದ ಸಬ್ ಇನ್ಸ್ಪೆಕ್ಟರ್ ಗಳು ಹಾಜರಿದ್ದರು. ಎಸಿಪಿ ಶಿವಶಂಕರ್ ಮಾತನಾಡಿ ಕೃಷ್ಣರಾಜ ಭಾಗದ ಎಲ್ಲಾ ರೌಡಿ ಶೀಟರ್ ಗಳಿಗೆ ಸೂಕ್ತ ಎಚ್ಚರಿಕೆ ಹಾಗೂ ತಿಳಿವಳಿಕೆ ನೀಡಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡದೆ ಒಳ್ಳೆಯ ನಡತೆಯಿಂದ ಬದುಕು ನಡೆಸುವಂತೆ ತಿಳಿಸಿದರು. ಒಂದು ವೇಳೆ ಸಮಾಜಘಾತುಕ ಕೃತ್ಯದಲ್ಲಿ ತೊಡಗಿಸಿಕೊಂಡಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಕಳುಹಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: