ಮೈಸೂರು

ಮೃಗಾಲಯದ ಪ್ರಾಣಿ ಪಕ್ಷಿ ಗಳ ದತ್ತು ಸ್ವೀಕಾರ

ಮೈಸೂರು. ಡಿ.3:- ಮೈಸೂರು ಮೃಗಾಲಯದ ಪ್ರಾಣಿ ಪಕ್ಷಿ ಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಅನೇಕರು ಒಂದು ವರ್ಷದ ಅವಧಿಗೆ ಪ್ರಾಣಿಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.
ಮೈಸೂರಿನ ಗೌರಿ ನಾಗರಾಜ್ ಎಂಬವರು 15,000 ರೂ. ಪಾವತಿಸಿ ಕಾಳಿಂಗ ಸರ್ಪ, ನಾಗರಹಾವು, ಇಂಡಿಯನ್ ಸಾಫ್ಟ್ ಶೆಲ್ ಆಮೆ ಮತ್ತು ಫರಿಯಾಲ್ ನ್ನು ದತ್ತು ಸ್ವೀಕರಿಸಿದ್ದಾರೆ.
ಬೆಂಗಳೂರಿನ ಬಸವರಾಜು ಎನ್.ಎಲ್ ಅವರು 15.000 ರೂ. ಪಾವತಿಸಿ ಟಾನಿ ಈಗಲ್ ಅನ್ನು ಒಂದು ವರ್ಷದವರೆಗೆ ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: