ಮೈಸೂರು

ಸಹಾಯಕ ನಿಯಂತ್ರಕ ಹುದ್ದೆ ಪರೀಕ್ಷೆ ಮುಂದೂ ಡುವಂತೆ ಮರೀತಿಬ್ಬೇಗೌಡ ಒತ್ತಾಯ

ಮೈಸೂರು, ಡಿ.3:- ಕರ್ನಾಟಕ ಲೋಕಸೇವಾ ಆಯೋಗವು ಡಿ.21ರಿಂದ 24ರವರೆಗೆ ನಡೆಸಲು ಉದ್ದೇಶಿಸಿ ರುವ ಲೆಕ್ಕ ಪತ್ರ ಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕ ಹುದ್ದೆಗಳ ಮುಖ್ಯ ಪರೀಕ್ಷೆ ಯನ್ನು ಮುಂದೂ ಡುವಂತೆ ವಿಧಾನ ಪರಿಷತ್ ಸದಸ್ಯ ಮರೀತಿಬ್ಬೇಗೌಡ ಆಗ್ರಹಿಸಿ ದ್ದಾರೆ.
ಈ ಕುರಿತು ಕೆಪಿಎಸ್ ಸಿ ಮುಖ್ಯ ಕಾರ್ಯದರ್ಶಿ ಗೆ ಪತ್ರ ಬರೆದಿರುವ ಅವರು ಇದೇ ಪರೀಕ್ಷೆಯ ಅವಧಿಯಲ್ಲಿ ಭಾರತೀಯ ಕಂಪನಿ ಕಾರ್ಯದರ್ಶಿ ಸಂಸ್ಥೆಯ ಸ್ಟಾ ಫ್ ಸೆಲೆ ಕ್ಷನ್ ಪರೀಕ್ಷೆ ನಿಗದಿ ಯಾಗಿದೆ. ಅದೇ ರೀತಿ ಡಿಸೆಂಬರ್ 22ರಂದು ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಪರೀಕ್ಷಾ ರ್ಥಿಗಳು ರಾಜ್ಯದ ವಿವಿಧ ಭಾಗಗಳಿಂದ
ಪರೀಕ್ಷಾ ಕೇಂದ್ರ ಗಳಿಗೆ ತೆರಳಬೇಕಿರುವುದರಿಂದ ಮತದಾನ ದ ಅವಕಾಶ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಸಹಾಯಕ ನಿಯಂತ್ರಕ ಹುದ್ದೆಗಳ ಪರೀಕ್ಷೆ ಯನ್ನು ಮುಂದೂ ಡು ವಂತೆ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: