ಕರ್ನಾಟಕಪ್ರಮುಖ ಸುದ್ದಿಮೈಸೂರು

ಸುತ್ತೂರು ಶ್ರೀ ಭೇಟಿ ಮಾಡಿದ ನಾಡೋಜ ಕಣವಿ

ನಾಡಹಬ್ಬ ಮೈಸೂರು ದಸರಾ ಉತ್ಸವದ ಉದ್ಘಾಟನೆಗಾಗಿ ಎರಡು ದಿನ ಮೊದಲೇ ನಗರಕ್ಕಾಗಮಿಸಿದ ಜನಪ್ರಿಯ ಕವಿ, ನಾಡೋಜ ಚನ್ನವೀರ ಕಣವಿಯವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು.

ಮಠಕ್ಕಾಗಮಿಸಿದ ಕಣವಿಯವರನ್ನು ಆದರದಿಂದ ಬರಮಾಡಿಕೊಂಡ ಶ್ರೀಗಳು ಶಾಲು ಹೊದಿಸಿ, ಫಲತಾಂಬೂಲ, ಸ್ಮರಣಿಕೆ  ನೀಡಿ ಗೌರವಿಸಿದರು.  ಈ ಸಂದರ್ಭ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಸಂತಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ, ಗಾಂಧಿಭವನದ ನಿರ್ದೇಶಕ ಡಾ.ಶಿವರಾಜಪ್ಪ ಮತ್ತಿತರರು ಜೊತೆಗಿದ್ದರು.

Leave a Reply

comments

Related Articles

error: