ಕರ್ನಾಟಕಪ್ರಮುಖ ಸುದ್ದಿ

ರಾಯಚೂರಿನಲ್ಲಿ ದನಗಾಹಿ ಬಾಲಕ ಮೊಸಳೆ ಪಾಲು: ರುಂಡ ಮಾತ್ರ ಪತ್ತೆ

ರಾಯಚೂರು,ಡಿ.3-ಕೃಷ್ಣನದಿ ಪಾತ್ರದಲ್ಲಿ ನೀರು ಕುಡಿಯಲು ಹೋಗಿದ್ದ ಬಾಲಕನನ್ನು ಮೊಸಳೆ ಬಲಿ ಪಡೆದಿರುವ ಘಟನೆ ನಿನ್ನೆ ಸಂಜೆ ತಾಲೂಕಿನ ಡಿ. ರಾಂಪುರ ಸಮೀಪ ನಡೆದಿದೆ.

ಗ್ರಾಮದ ಮಲ್ಲಿಕಾರ್ಜುನ (12) ಮೃತ ಬಾಲಕ. ನೀರು ಕುಡಿಯಲು ನದಿ ಪಾತ್ರಕ್ಕೆ ಹೋದಾಗ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿದೆ. ಈ ದೃಶ್ಯವನ್ನು ಉಳಿದ ಯುವಕರು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಪೊಲೀಸರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಶೋಧ ಕಾರ್ಯ ನಡೆಸಿದ್ದು, ರಾತ್ರಿ 2 ಗಂಟೆಗೆ ಬಾಲಕನ ರುಂಡ ಮಾತ್ರ ಸಿಕ್ಕಿದೆ. ಯರಗೇರಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಎಂ.ಎನ್)

Leave a Reply

comments

Related Articles

error: