ಮೈಸೂರು

ಸ್ಮಾರ್ಟ್ ಹಳ್ಳಿಗೆ ಪ್ರೋತ್ಸಾಹ ನೀಡಬೇಕಿದೆ : ಡಾ.ಎಸ್.ಅಯ್ಯಪ್ಪನ್

ನ್ಯೂಟ್ರಿಷನ್ ಸೊಸೈಟಿ ಆಫ್ ಇಂಡಿಯಾ, ಯುವರಾಜ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೌಷ್ಠಿಕತೆ ವಿಭಾಗ ಸಹಯೋಗದಲ್ಲಿ ಮೈಸೂರಿನ ಮಾನಸಗಂಗೋತ್ರಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಫುಡ್ ಬೇಸ್ಡ್ ಅಪ್ರೋಚಸ್ಸ್ ಫಾರ್ ಟ್ರಾನ್ಸ್ ಲೇಷನಲ್ ನ್ಯೂಟ್ರಿಷನ್ ಕುರಿತ 2 ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಭಾರತೀಯ ಕೃಷಿ ಸಂಶೋಧನ ಪರಿಷತ್‍ನ ನಿವೃತ್ತ ಮಹಾ ನಿರ್ದೇಶಕ ಡಾ.ಎಸ್.ಅಯ್ಯಪ್ಪನ್  ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಭಾರತದಲ್ಲಿನ ಆಹಾರ ಪದಾರ್ಥದಲ್ಲಿ ಪೌಷ್ಠಿಕಾಂಶದ ಬೆಳೆಗಳು ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಭಾರತ ದ್ವಿದಳ ಧಾನ್ಯಗಳಿಗೆ ಹೆಸರಾಗಿತ್ತು. ಆದರೆ ದಿನೇ ದಿನೇ ಇಳುವರಿ ಕಡಿಮೆಯಾಗುತ್ತಿದೆ. ಈಗ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಕೃಷಿ ವ್ಯವಸ್ಥೆಯೇ ಬುಡಮೇಲಾಗಿದೆ ಎಂದರು. 2050ರ ವೇಳೆಗೆ ಜಗತ್ತಿನ ಜನಸಂಖ್ಯೆ ಶೇ.70 ರಷ್ಟು ಹೆಚ್ಚಾಗಲಿದ್ದು, ವ್ಯವಸಾಯದ ಚಟುವಟಿಕೆಗಳಲ್ಲಿ ಭೂಮಿಯ ಸರಿಯಾದ ನಿರ್ವಹಣೆ, ಹೊಸತನ, ಪರ್ಯಾಯ ಬೆಳೆ, ಸಂಶೋಧನೆಗಳು ಹಾಗೂ ನೀರಿನ ನಿರ್ವಹಣೆ ಸರಿಯಾದ ರೀತಿಯಲ್ಲಾಗಬೇಕಿದ್ದು, ಅದಕ್ಕಾಗಿ ಸ್ಮಾರ್ಟ್ ಹಳ್ಳಿ ಹಾಗೂ ಸ್ಮಾರ್ಟ್ ರೈತರಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಆಹಾರ ವಿಜ್ಞಾನ ಮತ್ತು ಪೌಷ್ಠಿಕತೆ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಮುನಾ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ  ಇಂಟರ್ ನ್ಯಾಷನಲ್ ಯೂನಿಯನ್ ಆಫ್ ನ್ಯೂಟ್ರಿಷನಲ್ ಸೈನ್ಸಸ್ ಉಪಾಧ್ಯಕ್ಷ ಡಾ.ವಿ.ಪ್ರಕಾಶ್, ಮೈಸೂರು ವಿಶ್ವವಿದ್ಯಾಲಯದ  ಕುಲಪತಿ ಪ್ರೊ.ದಯಾನಂದ ಮಾನೆ, ಯುವರಾಜ ಕಾಲೇಜು ಆಹಾರ ವಿಜ್ಞಾನ ಮತ್ತು ಪೌಷ್ಠಿಕತೆ ವಿಭಾಗ ಪ್ರಾಧ್ಯಾಪಕ ಡಾ.ಆರ್.ಶೇಖರ್ ನಾಯಕ್ , ಪ್ರಾಂಶುಪಾಲ ಡಾ.ಆರ್. ಗಣೇಶ್ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: