ಮೈಸೂರು

ಸಿರಿಧಾನ್ಯ ಮೇಳ ಹಾಗೂ ತರಬೇತಿ ಕಾರ್ಯಾಗಾರ ‘ಏ.15 ಮತ್ತು 16ರಂದು’

ಮೈಸೂರಿನ ತಂತ್ವ ಆರ್ಗಾನಿಕ್ ಅಂಡ್ ನ್ಯಾಚುರಲ್ಸ್ ನಿಂದ ಸಾವಯವ ಜೀವಾಮೃತ ಉತ್ಪನ್ನಗಳ ತಯಾರಿಕಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಂತ್ವ ನ ಪದ್ಮಜ ಅಟ್ಲೂರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಈ ಬಗ್ಗೆ ಮಾತನಾಡಿ ಏ.15 ಮತ್ತು 16ರಂದು, ಸರಸ್ವತಿಪುರಂನ ಮಲ್ಲಾರ ಭವನದಲ್ಲಿ ಎರಡು ದಿನಗಳಲ್ಲಿ ತರಬೇತಿ ಸೇರಿದಂತೆ ಸಿರಿಧಾನ್ಯಗಳ ಮೇಳ, ಮಾರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.  ಏ.15ರಂದು ಬೆಳಿಗ್ಗೆ 10ಗಂಟೆಗೆ ಮೈಸೂರು ಪೇಂಟ್ಸ್ ಅಂಡ್‍ ವಾರ್ನಿಷ್‍ ಅಧ್ಯಕ್ಷ ಹೆಚ್.ಎ.ವೆಂಕಟೇಶ್  ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡುವರು. ತರಬೇತಿಯಲ್ಲಿ ಪಂಚಗವ್ಯ, ಧೂಪ, ಸೊಳ್ಳೆಬತ್ತಿ,ಫಿನಾಯಿಲ್, ಹಲ್ಲುಪುಡಿ, ಫೇಸ್ ಪ್ಯಾಕ್, ನೋವು ನಿವಾರಕ ಎಣ್ಣೆ ಸೇರಿದಂತೆ ಹಲವಾರು ಜೈವಿಕ ಉತ್ಪನ್ನಗಳ ತಯಾರಿಕೆ ಬಗ್ಗೆ ತಿಳಿಸಲಾಗುವುದು, ರಾತ್ರಿ 8ರವರೆಗೆ ತರಬೇತಿ ನಡೆಯುವುದು ಎಂದರು.

ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಏ.16ರಂದು ನಡೆಯಲಿದ್ದು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು, ಪಂಚಗವ್ಯ, ನಾಟಿ ಹಸುವಿನಿಂದಾಗುವ ಪ್ರಯೋಜನ ಬಗ್ಗೆ ಆಂಧ್ರಪ್ರದೇಶದ ಪಂಚಗವ್ಯ ಸಿದ್ಧ ಕೃಷ್ಣ ವಡ್ಡೆ ಉಪನ್ಯಾಸ ನೀಡುವರು ಎಂದು ತಿಳಿಸಿದರು.

ಸಾವಯವ ಉತ್ಪನ್ನಗಳ ವ್ಯವಸ್ಥಾಪಕ ತೇಜನಾಯಕ್ ಮಾತನಾಡಿ, ವಿದೇಶಿಗರು ದೇಶಿ ಉತ್ಪನ್ನಗಳ ಮೇಲೆ ಪ್ರಾಬಲ್ಯ ಸಾಧಿಸಿ ಪೇಟೆಂಟ್‍ ಪಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಪುರಾತನ ಚಿಕಿತ್ಸಾ ಪದ್ಧತಿಯು ಅತ್ಯಂತ ಪರಿಣಾಮಕಾರಿಯಾಗಿದ್ದು, ಹಸುವಿನ ಮೂಲ ಉತ್ಪನ್ನಗಳಿಂದಲೇ ಕ್ಯಾನ್ಸರ್ ಸೇರಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿಯಿದೆ ಎಂದರು. ಆರ್ಕಾಧಾಮ ಗೋಶಾಲೆಯ ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಹೆಚ್ಚಿನ ಮಾಹಿತಿಗಾಗಿ 9535797572 ಮತ್ತು 8317382596 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: