ಮೈಸೂರು

ಹೊಟ್ಟೆನೋವು ತಾಳಲಾರದೇ ಯುವಕ ನೇಣಿಗೆ ಶರಣು

ಮೈಸೂರು,ಡಿ.4:- ಯುವಕನೋರ್ವ ಹೊಟ್ಟೆ ನೋವು ತಾಳಲಾರದೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಜನತಾ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಮೂಲತಃ ಕೆ.ಜಿ.ಕೊಪ್ಪಲಿನ, ಜನತಾನಗರ ಗಣಪತಿ ದೇವಸ್ಥಾನ ರಸ್ತೆಯ ನಿವಾಸಿ ಕುಮಾರ್ ಅವರ ಪುತ್ರ ಕೆ.ರವಿಕುಮಾರ್(21) ಎಂದು ಹೇಳಲಾಗಿದೆ. ಕಳೆದ ಆರು ತಿಂಗಳಿನಿಂದ ಪದೇ ಪದೇ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರೂ ಕಡಿಮೆಯಾಗಿರಲಿಲ್ಲ ಎನ್ನಲಾಗಿದೆ. ಇದರಿಂದ ಮಮನನೊಂದ ರವಿಕುಮಾರ್ ನೇಣಿಗೆ ಕೊರಳೊಡ್ಡಿದ್ದಾರೆ.
ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: