ಮೈಸೂರು

ಪ್ರತ್ಯೇಕ ಅಪಘಾತ ದಲ್ಲಿ ಇಬ್ಬರ ಸಾವು

ಮೈಸೂರು,ಡಿ.4:- ಮೈಸೂರಿನಲ್ಲಿ ನಿನ್ನೆ ನಡೆದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತ ಪಟ್ಟಿದ್ದಾರೆ.
ಹುಣಸೂರಿನಲ್ಲಿ ಹಳ್ಳಕ್ಕೆ ಕಾರೊಂದು ಬಿದ್ದಿದ್ದು ಕಾರಿನಲ್ಲಿದ್ದ ಗಾಯಾಳುವನ್ನು ಆಸ್ಪತ್ರೆಗೆ ಕೆಪಿಟಿಸಿಎಲ್ ನೌಕರರು ಚಿಕಿತ್ಸೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಹುಣಸೂರು ರಸ್ತೆಯ ಪಡುವಾರಳ್ಳಿ ಸಮೀಪದ ಮೂಕಾಂಬಿಕಾ ಕನ್ವೆನ್ಶನ್ ಹಾಲ್ ಬಳಿ ಮೈಸೂರು ಕಡೆ ಅತಿವಾಗವಾಗಿ ಬಂದ ಕಾರೊಂದು ಎಡಭಾಗದ ಕಂಬಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಚಿರಂಜೀವಿ ಎಂಬವರೋರ್ವರು ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರು ಗಾಯಗೊಂಡಿದ್ದು ಗಾಯಾಳುಗಳನ್ನು ಕೆಪಿಟಿಸಿಎಲ್ ನೌಕರರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಶ್ರೀರಂಘಪಟ್ಟಣದಿಂದ ಮೈಸೂರು ಕಡೆ ಬರುತ್ತಿದ್ದ ಸ್ಕೂಟರ್ ಗೆ ಸಿದ್ದಲಿಂಗಪುರದ ಬಳಿ ಹಿಂದಿನಿಂದ ಕಾರೊಂದು ಗುದ್ದಿದ ಪರಿಣಾಮ ಸ್ಕೂಟರ್ ಹಿಂಬದಿ ಕುಳಿತಿದ್ದ ಬಿ.ಜೆ.ಸರಸ್ವತಿ ಎಂಬವರು ಸಾವನ್ನಪ್ಪಿದ್ದಾರೆ. ಸ್ಕೂಟರ್ ಚಾಲನೆ ಮಾಡುತ್ತಿದ್ದ ಇವರ ಸ್ನೇಹಿತೆ ಲಕ್ಷ್ಮಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎನ್.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: